ಹಾಸನ: ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳು ಮುಂದುವರೆದಿವೆ. ಹೃದಯಾಘಾತದಿಂದಾಗಿ ಕುಳಿತಲ್ಲೇ 63 ವರ್ಷದ ವೃದ್ಧರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ನಿರ್ವಾಣಿಗೌಡ ಮೃತಪಟ್ಟವರು ಎಂದು ಹೇಳಲಾಗಿದೆ. ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಗರಿ ಗ್ರಾಮದ ನ್ಯಾಯಬೆಲೆಯ ಅಂಗಡಿಯ ಸಮೀಪ ಘಟನೆ ನಡೆದಿದೆ. ಅಡವಿ ಬಂಟೇನಹಳ್ಳಿಯ ನಿರ್ವಾಣಿಗೌಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಗರಿ ಗ್ರಾಮದ ನ್ಯಾಯಬೆಲೆ ಅಂಗಡಿಗೆ ದಿನಸಿ ತರಲು ನಿರ್ವಾಣಿಗೌಡ ಬಂದಿದ್ದರು. ನ್ಯಾಯಬೆಲೆಯ ಅಂಗಡಿಯ ಬಳಿ ಕುಳಿತಿದ್ದಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಇದುವರೆಗೆ 36 ಜನರು ಸಾವನ್ನಪ್ಪಿದ್ದಾರೆ.