SHOCKING VIDEO | ಸಾರ್ವಜನಿಕವಾಗಿಯೇ ನಟನಿಗೆ ಮುತ್ತಿಕ್ಕಲು ಮುಂದಾದ ಮಹಿಳಾ ಅಭಿಮಾನಿ

ಚಲನಚಿತ್ರ ನಟ – ನಟಿಯರಿಗೆ ಅಭಿಮಾನಿಗಳಿರುವುದು ಸಾಮಾನ್ಯ ಸಂಗತಿ. ಹೀಗೆ ತಮ್ಮ ನೆಚ್ಚಿನ ನಟ – ನಟಿಯರು ಆಕಸ್ಮಿಕವಾಗಿ ಎದುರಾದ ಸಂದರ್ಭದಲ್ಲಿ ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಗಿ ಬೀಳುತ್ತಾರೆ. ಇಂತಹ ಸಂದರ್ಭದಲ್ಲಿ ಕೆಲವರು ಅತಿರೇಕದ ವರ್ತನೆ ತೋರುತ್ತಾರೆ. ಇದೀಗ ಅಂತಹುದೇ ಒಂದು ಘಟನೆ ವರದಿಯಾಗಿದೆ.

ಖ್ಯಾತ ಬಾಲಿವುಡ್ ನಟ ಆದಿತ್ಯ ರಾಯ್ ಕಪೂರ್ ಮುಂಬೈನಲ್ಲಿ ಬರುತ್ತಿದ್ದಾಗ ಅಭಿಮಾನಿಗಳ ಒಂದು ಗುಂಪು ಎದುರಾಗಿದೆ. ಆಗ ಮಹಿಳಾ ಅಭಿಮಾನಿಯೊಬ್ಬರು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದು, ಅದಕ್ಕೆ ಆದಿತ್ಯ ರಾಯ್ ಕಪೂರ್ ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಇಷ್ಟಕ್ಕೆ ಸುಮ್ಮನಾಗದ ಆ ಮಹಿಳಾ ಅಭಿಮಾನಿ ಬಲವಂತವಾಗಿ ಮುತ್ತಿಕ್ಕಲು ಮುಂದಾಗಿದ್ದಾರೆ.

ಪರಿಸ್ಥಿತಿಯನ್ನು ಹೇಗೋ ನಿಭಾಯಿಸಿದ ಆದಿತ್ಯ ರಾಯ್ ಕಪೂರ್ ನಯವಾಗಿಯೇ ಆಕೆಯ ಕೋರಿಕೆಯನ್ನು ತಿರಸ್ಕರಿಸಿದ್ದಾರೆ. ಇಷ್ಟಾದರೂ ಕೂಡ ಆಕೆ ತನ್ನ ತೋಳುಗಳನ್ನು ಬಳಸಿ ಮುತ್ತು ನೀಡಲು ಹೋದಾಗ ಹಿಂದೆ ಸರಿದುಕೊಂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವಿಡಿಯೋ ನೋಡಿ ಕಮೆಂಟ್ ಹಾಕಿರುವ ಒಬ್ಬರು, ನಾನು ಕೂಡ ಅವರ ಅಭಿಮಾನಿ ಆದರೆ ಇಂತಹ ಅತಿರೇಕದ ವರ್ತನೆ ತೋರುವುದಿಲ್ಲ ಎಂದಿದ್ದರೆ, ಮತ್ತೊಬ್ಬರು ಹಲೋ ಮೇಡಂ, ಕೋವಿಡ್ ಇನ್ನೂ ಹೋಗಿಲ್ಲ ಎಂಬುದು ನಿಮ್ಮ ಗಮನಕ್ಕೆ ಇರಲಿ ಎಂದಿದ್ದಾರೆ. ಇನ್ನೊಬ್ಬ ವ್ಯಕ್ತಿ, ಇದೇ ರೀತಿ ಯಾರಾದರೂ ಪುರುಷ ಅಭಿಮಾನಿ ಮಾಡಿದ್ದರೆ…… ಎಂದು ಪ್ರಶ್ನಿಸಿದ್ದಾರೆ.

https://youtu.be/xNiENB4FDpw

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read