ತುಮಕೂರು : ತುಮಕೂರಿನಲ್ಲಿ ಬೆಚ್ಚಿ ಬೀಳಿಸೋ ಕೃತ್ಯ ನಡೆದಿದ್ದು, ಮನೆಗೆ ನುಗ್ಗಿ ಕತ್ತು ಸೀಳಿ ಮಹಿಳೆಯನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹೆಂಡಸಗೆರೆ ಗ್ರಾಮದಲ್ಲಿ ಘಟನೆ ನಡೆದಿದೆ.
ಪತಿಯನ್ನ ಕಳೆದುಕೊಂಡಿದ್ದ ಮಂಜುಳಾ ಮಗನ ಜೊತೆ ತೋಟದ ಮನೆಯಲ್ಲಿ ವಾಸವಾಗಿದ್ದರು. ಇತ್ತೀಚೆಗಷ್ಟೇ ಮಗನಿಗೆ ಮದುವೆ ಕೂಡ ಮಾಡಿದ್ದರು.
ಮಗ ಪತ್ನಿ ಮನೆಗೆ ಹೋಗಿದ್ದಾಗ ಮಂಜುಳಾ ಮನೆಗೆ ನುಗ್ಗಿದ ದುಷ್ಕರ್ಮಿಗಳು ಕತ್ತು ಸೀಳಿ ಮಂಜುಳಾರನ್ನ ಕೊಲೆ ಮಾಡಿ ಹೋಗಿದ್ದಾರೆ. ಮರುದಿನ ಮೈದುನ ತೋಟದ ಮನೆಗೆ ಹೋಗಿದ್ದಾಗ ಘಟನೆ ಬೆಳಕಿಗೆ ಬಂದಿದೆ. ಅವರು ಸಿಎಸ್ ಪುರ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
