SHOCKING : ವೈದ್ಯೆಯ ಅತ್ಯಾಚಾರ-ಕೊಲೆಗೂ ಮುನ್ನ ಮತ್ತೋರ್ವ ಮಹಿಳೆಗೆ ಕಿರುಕುಳ ನೀಡಿದ್ದ ಆರೋಪಿ : ವರದಿ

ಕೊಲ್ಕತ್ತಾ : ವೈದ್ಯೆಯ ಅತ್ಯಾಚಾರ-ಕೊಲೆಗೂ ಮುನ್ನ ಆರೋಪಿ ಸಂಜಯ್ ರಾವ್ ಮತ್ತೋರ್ವ ಮಹಿಳೆಗೆ ಕಿರುಕುಳ ನೀಡಿದ್ದನು ಎಂಬ ಮಾಹಿತಿ ಬಯಲಾಗಿದೆ.

ಕೋಲ್ಕತಾದ ಆರ್ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದ ಆರೋಪಿ ಸಂಜಯ್ ರಾಯ್ ಭಾನುವಾರ ಪಾಲಿಗ್ರಾಫ್ ಪರೀಕ್ಷೆಯಲ್ಲಿ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.

ಆರ್ ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತರಬೇತಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಂಜೋಯ್ ರಾಯ್   ಸುಳ್ಳು ಪತ್ತೆ ಪರೀಕ್ಷೆಯ ಸಮಯದಲ್ಲಿ, ಸಂಜಯ್ ರಾಯ್ ಅವರು ಅಪರಾಧಕ್ಕೆ ಕೆಲವು ಗಂಟೆಗಳ ಮೊದಲು ತಮ್ಮ ಸ್ನೇಹಿತನೊಂದಿಗೆ ರೆಡ್ ಲೈಟ್ ಪ್ರದೇಶಕ್ಕೆ ಭೇಟಿ ನೀಡಿದ್ದರು ಎಂದು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ತಿಳಿಸಿದ್ದಾರೆ. ಆದರೆ ಅಲ್ಲಿ ಆತ ಲೈಂಗಿಕ ಸಂಬಂಧ ಬೆಳೆಸಿಲ್ಲ ಎಂದು ಅವರು ಹೇಳಿದ್ದಾರೆ.

ಸಂಜಯ್ ರಾಯ್ ಬೀದಿಯಲ್ಲಿ ಇನ್ನೊಬ್ಬ ಮಹಿಳೆಗೆ ಕಿರುಕುಳ ನೀಡಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.ಸಂಜಯ್ ರಾಯ್ ತನ್ನ ಗೆಳತಿಗೆ ವೀಡಿಯೊ ಕರೆ ಮಾಡಿ ಅವಳ ನಗ್ನ ಫೋಟೋಗಳನ್ನು ಕೇಳಿದನು.
ಘಟನೆ ನಡೆದ ರಾತ್ರಿ ಸಂಜಯ್ ರಾಯ್ ತನ್ನ ಸ್ನೇಹಿತನೊಂದಿಗೆ ಮದ್ಯಪಾನ ಮಾಡಿದ್ದನು. ನಂತರ ಆತ ರೆಡ್ ಲೈಟ್ ಏರಿಯಾಗೆ ತೆರಳಿದ್ದನು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read