ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಸ್ನೇಹಿತನೊಂದಿಗೆ ತೆರಳುತ್ತಿದ್ದಾಗಲೇ ಯುವಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ದಾವಣಗೆರೆಯ ಬಸಾಪುರ ಗ್ರಾಮದ ಕೆಂಪನಹಳ್ಳಿಯ ಕೆ. ಆಕರ್ಷ್(29) ಮೃತಪಟ್ಟ ಯುವಕ. ದಾವಣಗೆರೆಯಿಂದ ಸ್ನೇಹಿತನೊಂದಿಗೆ ಬೈಕ್ ನಲ್ಲಿ ಸಿಗಂದೂರು ದೇವಾಲಯಕ್ಕೆ ತೆರಳುತ್ತಿದ್ದಾಗ ಬಲಸಗೋಡು ಗ್ರಾಮದ ಬಳಿ ಹೃದಯಘಾತದಿಂದ ಆಕರ್ಷ್ ಮೃತಪಟ್ಟಿದ್ದಾರೆ. ಆನಂದಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.