ಲಕ್ನೋ: ಉತ್ತರಪ್ರದೇಶದ ಗೋರಖ್ ಪುರದಲ್ಲಿ ಗೋ ಕಳ್ಳ ಸಾಗಣೆ ತಡೆದ ಯುವಕನ ಬಾಯಿ ಒಳಗೆ ಗುಂಡಿಟ್ಟು ಹತ್ಯೆ ಮಾಡಲಾಗಿದೆ.
ಸೋಮವಾರ ಗೋವುಗಳ ಕಳ್ಳ ಸಾಗಾಣೆದಾರರು ನೀಟ್ ವೈದ್ಯಕೀಯ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ 19 ವರ್ಷದ ವಿದ್ಯಾರ್ಥಿಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.
ವಿದ್ಯಾರ್ಥಿ ದೀಪಕ್ ಗುಪ್ತಾನ ಅವರ ಬಾಯಿಯೊಳಗೆ ಗುಂಡು ಹಾರಿಸಿದ ದುಷ್ಕರ್ಮಿಗಳು ಕೊಂದಿದ್ದಾರೆ. ತಲೆಯನ್ನು ವಾಹನದಿಂದ ಜಜ್ಜಿ ಆತನ ಮನೆಯಿಂದ ನಾಲ್ಕು ಕಿಲೋಮೀಟರ್ ದೂರದ ಪ್ರದೇಶದಲ್ಲಿ ಶವ ಎಸೆದಿದ್ದಾರೆ.
ಸೋಮವಾರ ಮಧ್ಯಾಹ್ನ ಹಸುಗಳನ್ನು ಕಳವು ಮಾಡಲು ಮೂರು ವಾಹನಗಳಲ್ಲಿ ದುಷ್ಕರ್ಮಿಗಳು ಬಂದಿದ್ದಾರೆ. ಗ್ರಾಮಸ್ಥರು ಕೂಗಿದಾಗ ದೀಪಕ್ ಒಬ್ಬನೇ ಕ್ರಿಮಿನಲ್ ಗಳನ್ನು ಅಟ್ಟಿಸಿಕೊಂಡು ಹೋಗಿದ್ದ. ದೀಪಕ್ ನನ್ನು ಹಿಡಿದುಕೊಂಡ ದನಗಳ್ಳರು ತಮ್ಮ ವಾಹನದಲ್ಲಿ ಕೂರಿಸಿಕೊಂಡು ಒಂದು ಕಿಲೋಮೀಟರ್ ಸುತ್ತಾಡಿಸಿ ನಂತರ ಬಾಯಿ ಒಳಗೆ ಗುಂಡಿಟ್ಟು ಹತ್ಯೆ ಮಾಡಿದ್ದು, ತಲೆಗೆ ವಾಹನ ಗುದ್ದಿಸಿ ಶವ ಎಸೆದು ಪರಾರಿಯಾಗಿದ್ದಾರೆ.