ಡಿಜಿಟಲ್ ಡೆಸ್ಕ್ : ಸಾರ್ವಜನಿಕ ಸ್ಥಳದಲ್ಲಿ ‘ಮಾಡೆಲ್’ ಮುಂದೆ ಹಸ್ತಮೈಥುನ ಮಾಡಿಕೊಂಡಿದ್ದ ಕಾಮುಕ ಅರೆಸ್ಟ್ ಆಗಿದ್ದಾನೆ. ಗುರುಗ್ರಾಮದ ರಾಜೀವ್ ಚೌಕ್ನಲ್ಲಿ ಕ್ಯಾಬ್ಗಾಗಿ ಕಾಯುತ್ತಿದ್ದ ಮಾಡೆಲ್ ಒಬ್ಬರಿಗೆ ಹಾಡಹಗಲೇ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿತ್ತು. . ಸಂತ್ರಸ್ತೆ ವಿಡಿಯೋ ಮೂಲಕ ಘಟನೆ ಬಗ್ಗೆ ಹಂಚಿಕೊಂಡಿದ್ದರು.
ಸಿಸಿಟಿವಿ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಅಭಿಲಾಷ್ ಕುಮಾರ್ ಎಂ.ಟೆಕ್ ಪದವಿ ಪಡೆದಿದ್ದು, ಖಾಸಗಿ ಸಂಸ್ಥೆಯಲ್ಲಿ ಸಹಾಯಕ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದಾನೆ. ಪೊಲೀಸರು ಆ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಆತನನ್ನು ಗುರುತಿಸಿ ಬಂಧಿಸಲಾಗಿದೆ.
ಆಗಸ್ಟ್ 2 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ದೆಹಲಿ-ಜೈಪುರ ಹೆದ್ದಾರಿಯ ರಾಜೀವ್ ಚೌಕ್ನಲ್ಲಿ ನಾನು ಕ್ಯಾಬ್ಗಾಗಿ ಕಾಯುತ್ತಿದ್ದೆ. ಆಗ ಒಬ್ಬ ವ್ಯಕ್ತಿ ನಿರಂತರವಾಗಿ ನನ್ನನ್ನು ನೋಡುತ್ತಾ ಇದ್ದ ನಂತರ ತನ್ನ ಪ್ಯಾಂಟ್ನ ಜಿಪ್ ಬಿಚ್ಚಿ ಹಸ್ತಮೈಥುನ ಮಾಡಿಕೊಳ್ಳಲು ಪ್ರಾರಂಭಿಸಿದನು ಎಂದು ಮಾಡೆಲ್ ಹೇಳಿದ್ದಾಳೆ. ಮಾಡೆಲ್ ಇಡೀ ಘಟನೆಯನ್ನು ತನ್ನ ಫೋನ್ನಲ್ಲಿ ರೆಕಾರ್ಡ್ ಮಾಡಿದ್ದಾರೆ.
ಆ ಕ್ಷಣದಲ್ಲಿ ತಾನು ಆಘಾತ ಮತ್ತು ಭಯದಲ್ಲಿದ್ದಾಗ ಕಿರುಚಲಿಲ್ಲ ಅಥವಾ ಪ್ರತೀಕಾರ ತೀರಿಸಿಕೊಳ್ಳಲಿಲ್ಲ ಎಂದು ಮಾಡೆಲ್ ತನ್ನ ವೀಡಿಯೊ ಪೋಸ್ಟ್ನಲ್ಲಿ ಹೇಳಿದ್ದಾರೆ. “ನಾನು ಅವನಿಗೆ ಕಪಾಳಮೋಕ್ಷ ಮಾಡಬೇಕಿತ್ತು ಎಂದು ಜನರು ಹೇಳಿದರು, ಆದರೆ ಆ ಕ್ಷಣದಲ್ಲಿ ಮಹಿಳೆಯ ಮನಸ್ಸಿನಲ್ಲಿ ಏನಾಗುತ್ತಿದೆ ಎಂದು ಯಾರಿಗೂ ನಿಜವಾಗಿಯೂ ಅರ್ಥವಾಗುವುದಿಲ್ಲ. ನಾನು ಸುರಕ್ಷಿತವಾಗಿರಲು ಬಯಸಿದ್ದೆ” ಎಂದು ಅವರು ಹೇಳಿದರು.