ವಯನಾಡ್ : ಕೇರಳದ ವಯನಾಡ್ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದ್ದು, ಭಯಾನಕ ದೃಶ್ಯವೊಂದರಲ್ಲಿ ವ್ಯಕ್ತಿಯೊಬ್ಬರು ಮಣ್ಣಿನಡಿ ಸಿಲುಕಿಕೊಂಡಿದ್ದು, ಬೃಹತ್ ಬಂಡೆ ಹಿಡಿದುಕೊಂಡು ಸಹಾಯಕ್ಕಾಗಿ ಅಂಗಲಾಚಿದ ಹೃದಯ ವಿದ್ರಾವಕ ವೀಡಿಯೊ ವೈರಲ್ ಆಗಿದೆ.
ವ್ಯಕ್ತಿ ಹೇಗೋ ದೊಡ್ಡ ಬಂಡೆಗಳ ನಡುವೆ ಸಿಲುಕಿಕೊಂಡಿದ್ದಾನೆ. ಭೂಕುಸಿತದಲ್ಲಿ ಸಿಲುಕಿರುವ ವ್ಯಕ್ತಿ ಸಹಾಯ ಕೋರಿದ್ದಾರೆ. ಈ ಹೃದಯ ವಿದ್ರಾವಕ ವೀಡಿಯೊ ವೈರಲ್ ಆಗಿದೆ.
ಪ್ರವಾಹದ ನೀರಿನಲ್ಲಿ ಬಂಡೆಗಳ ನಡುವೆ ಸಿಲುಕಿಕೊಂಡಿರುವ ಆತ ನನ್ನನ್ನು ರಕ್ಷಿಸಿ ಎಂದು ಬೇಡಿಕೊಂಡಿದ್ದಾನೆ. ಮಂಗಳವಾರ ಮುಂಜಾನೆ ಭಾರಿ ಮಳೆಯಿಂದಾಗಿ ಉಂಟಾದ ಭೀಕರ ಭೂಕುಸಿತದ ನಂತರ ನೂರಾರು ಜನರು ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿದೆ. ಗ್ರಾಮಸ್ಥರೊಬ್ಬರು ತೆಗೆದ ದೃಶ್ಯಗಳನ್ನು ದೂರದರ್ಶನ ಚಾನೆಲ್ ಗಳು ಪ್ರಸಾರ ಮಾಡಿದ್ದು, ಸ್ಥಳಕ್ಕೆ ರಕ್ಷಣಾ ತಂಡಗಳನ್ನು ಕಳುಹಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿವೆ.
கேரளாவின் வயநாட்டில் நிலச்சரிவில் சிக்கி உதவி கோரிய நபர்… வெளியான வீடியோ பதிவு…! #Wayanad | #Landslides | #Death | #NDRF | #Rescue | #WayanadLandslides | #PolimerNews pic.twitter.com/FySG2h0uJf
— Polimer News (@polimernews) July 30, 2024