ಬೆಂಗಳೂರು : ತಾಯಿತ ಕಟ್ಟುವ ನೆಪದಲ್ಲಿ ಮಹಿಳೆ ಮೇಲೆ ಮೌಲ್ವಿಯೋರ್ವ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತುಮಕೂರು ಮೂಲದ ಮಹಿಳೆ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದು, . ಸೋಂಪುರದ ಕೂತಘಟ್ಟ ಗ್ರಾಮದ ಭದ್ರೆ ಆಲಂ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯಾಗಿದ್ದಾನೆ.
ಸಂಸಾರದಲ್ಲಾದ ತೊಂದರೆ, ಕಷ್ಟಗಳನ್ನು ಹೇಳಿಕೊಂಡು ಯಂತ್ರದಾರ ಮಾಡಿಕೊಡಿ ಎಂದು ಮೌಲ್ವಿ ಬಳಿ ಮಹಿಳೆ ಬಂದಿದ್ದಾರೆ. ಆಗ ಭದ್ರೆ ಆಲಂ ಮಹಿಳೆಯನ್ನು ಕೊಠಡಿಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಘಟನೆ ನಡೆದು ಹಲವು ದಿನದ ಬಳಿಕ ಮಹಿಳೆ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ, ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.
You Might Also Like
TAGGED:ಲೈಂಗಿಕ ದೌರ್ಜನ್ಯ