ಕೇರಳ : ಹಲಸಿನ ಹಣ್ಣು ಬಿದ್ದು 9 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಮಲಪ್ಪುರಂನ ಕೊಟ್ಟಕ್ಕಲ್ ನಲ್ಲಿ ನಡೆದಿದೆ.
ಚಂಗುವೆಟ್ಟಿ ನಿವಾಸಿ ಕುಂಜಲವಿ ಅವರ ಪುತ್ರಿ ಆಯಿಷಾ ದಾಸ್ ಮೃತಪಟ್ಟ ದುರ್ದೈವಿ. ಆಯೇಷಾ ತನ್ನ ಸ್ನೇಹಿತರ ಜೊತೆ ಮನೆ ಹಿಂದುಗಡೆ ಆಟವಾಡುತ್ತಿದ್ದಾಗ ದೊಡ್ಡ ಗಾತ್ರದ ಹಲಸಿನ ಹಣ್ಣು ಆಕೆಯ ತಲೆ ಮೇಲೆ ಬಿದ್ದಿದೆ. ಗಂಭೀರವಾಗಿ ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ. ಮಗಳನ್ನು ಕಳೆದುಕೊಂಡ ಕುಟುಂಬ ಕಣ್ಣೀರಿಡುತ್ತಿದೆ.
You Might Also Like
TAGGED:ಹಲಸಿನ ಹಣ್ಣು