SHOCKING: ಜೈಲಿನಲ್ಲಿ 44 ಪುರುಷ, ಒಬ್ಬ ಮಹಿಳಾ ಖೈದಿಗೆ HIV ಸೋಂಕು

ಆಘಾತಕಾರಿ ಘಟನೆಯೊಂದರಲ್ಲಿ ಉತ್ತರಾಖಂಡದ ಹಲ್ದ್ವಾನಿ ಜಿಲ್ಲೆಯ ಜೈಲಿನಲ್ಲಿ ಕನಿಷ್ಠ 44 ಪುರುಷ ಕೈದಿಗಳು ಮತ್ತು ಒಬ್ಬ ಮಹಿಳಾ ಕೈದಿ ಹೆಚ್‌ಐವಿ ಸೋಂಕಿಗೆ ಒಳಗಾಗಿದ್ದಾರೆ.

ಸಾಮೂಹಿಕ ಪರೀಕ್ಷೆಯ ಸಮಯದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಸೌಮ್ಯ ರೋಗಲಕ್ಷಣಗಳೊಂದಿಗೆ ಸೋಂಕಿತ ಕೈದಿಗಳಿಗೆ ಔಷಧವನ್ನು ನೀಡಲಾಯಿತು. ಇತರರು ಉತ್ತಮ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹಲ್ದ್ವಾನಿ ಜೈಲಿನಲ್ಲಿ 44 ಕೈದಿಗಳಿಗೆ ಹೆಚ್ಐವಿ ಪಾಸಿಟಿವ್ ಕಂಡುಬಂದಿದ್ದು, ಒಬ್ಬ ಮಹಿಳಾ ಕೈದಿಗೂ ಹೆಚ್ಐವಿ ಪಾಸಿಟಿವ್ ಪತ್ತೆಯಾಗಿದೆ ಎಂದು ಸುಶೀಲಾ ತಿವಾರಿ ಆಸ್ಪತ್ರೆಯ ಎಆರ್ಟಿ ಸೆಂಟರ್ ಇಂಚಾರ್ಜ್ ಡಾ. ಪರಮ್ಜಿತ್ ಸಿಂಗ್ ತಿಳಿಸಿದರು.

HIV ರೋಗಿಗಳಿಗೆ ART(ಆಂಟಿರೆಟ್ರೋವೈರಲ್ ಥೆರಪಿ) ಕೇಂದ್ರವನ್ನು ಸಹ ಸ್ಥಾಪಿಸಲಾಗಿದೆ, ಅಲ್ಲಿ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ನಮ್ಮ ತಂಡವು ಜೈಲಿನಲ್ಲಿರುವ ಕೈದಿಗಳನ್ನು ನಿರಂತರವಾಗಿ ಪರೀಕ್ಷಿಸುತ್ತದೆ ಮತ್ತು ಯಾವ ಖೈದಿಯು HIV ಸೋಂಕಿಗೆ ಒಳಗಾಗಿದ್ದರೂ ಅವರಿಗೆ NACO ಮಾರ್ಗಸೂಚಿಗಳ ಆಧಾರದ ಮೇಲೆ ಉಚಿತ ಚಿಕಿತ್ಸೆ ಮತ್ತು ಔಷಧಿಗಳನ್ನು ನೀಡಲಾಗುತ್ತದೆ ಎಂದು ಡಾ. ಸಿಂಗ್ ಹೇಳಿದರು.

https://twitter.com/ANINewsUP/status/1645051113761124354

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read