ಬೆಂಗಳೂರು : ರಾಜ್ಯದಲ್ಲಿ ಆರೇ ತಿಂಗಳಲ್ಲಿ 2.3 ಲಕ್ಷ ಜನರಿಗೆ ನಾಯಿ ಕಚ್ಚಿದ್ದು, 19 ಮಂದಿ ರೇಬಿಸ್ ಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.
2025 ರ ಜನವರಿ 1 ರಿಂದ ಜೂನ್ 30 ರವರೆಗೆ ನಡೆದ ಘಟನೆ ಬಗ್ಗೆ ಆರೋಗ್ಯ ಇಲಾಖೆ ವರದಿ ಸಲ್ಲಿಸಿದೆ. ನಾಯಿ ಕಡಿತವನ್ನು ಅಧಿಸೂಚಿತ ಕಾಯಿಲೆ ಪಟ್ಟಿಗೆ 2022 ರಲ್ಲಿ ಕರ್ನಾಟಕ ಸರ್ಕಾರ ಸೇರ್ಪಡೆ ಮಾಡಿತ್ತು. ನಂತರ ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆಗಳು ನಾಯಿ ಕಡಿತ ಹಾಗೂ ಧೃಡಪಟ್ಟ ಪ್ರಕರಣವನ್ನು ಆರೋಗ್ಯ ಇಲಾಖೆಗೆ ಬರದಿ ಮಾಡುತ್ತಿದೆ.
ವಿಜಯಪುರ ಜಿಲ್ಲೆಯಲ್ಲಿ ಈ ವರ್ಷ 6 ತಿಂಗಳ ಅವಧಿಯಲ್ಲಿ ಅತಿ ಹೆಚ್ಚು ಪ್ರಕರಣ ವರದಿಯಾಗಿದೆ. ಅಲ್ಲಿ 15, 527 ಮಂದಿಗೆ ನಾಯಿಗಳು ಕಡಿದಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 13, 831 , ಹಾಸನದಲ್ಲಿ 13389, ದಕ್ಷಿಣ ಕನ್ನಡ 12524 ಹಾಗೂ ಬಾಗಲಕೋಟೆಯಲ್ಲಿ 12, 392 ಪ್ರಕರಣಗಳು ದಾಖಲಾಗಿದೆ. ವಿಜಯಪುರ- 15,527
ಯಾದಗಿರಿ – 1132, ಚಾಮರಾಜನಗರ ನಗರ – 1810. ಕೊಡಗು – 2523.
19 ಮಂದಿ ಬಲಿ
ಬೆಂಗಳೂರು ನಗರ ಜಿಲ್ಲೆಯಲ್ಲಿ ಅತ್ಯಧಿಕ ರೇಬೀಸ್ ಸಾವುಗಳು ವರದಿಯಾಗಿದೆ. 19 ಸಾವುಗಳಲ್ಲಿ 9 ಪ್ರಕರಣಗಳು ಈ ಒಂದೇ ಜಿಲ್ಲೆಯಲ್ಲಿ ಸಂಭವಿಸಿವೆ. ಬೆಳಗಾವಿ 5, ಬಾಗಲಕೋಟೆ, ಬಳ್ಳಾರಿ, ಚಿಕ್ಕಬಳ್ಳಾಪುರ ಮತ್ತು ಶಿವಮೊಗ್ಗದಲ್ಲಿ ತಲಾ ಒಂದು ಪ್ರಕರಣ ವರದಿಯಾಗಿವೆ.