ಬೆಂಗಳೂರು : ಬೆಂಗಳೂರಲ್ಲಿ ಯುವ ‘ಮಾಡೆಲ್’ ಮೇಲೆ ಸೀ ಬರ್ಡ್ ಬಸ್ ಸಿಬ್ಬಂದಿಗಳು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ. ಈತ ಬೆಂಗಳೂರು ಏರ್ ಪೋರ್ಟ್ ನಲ್ಲಿ ಇಳಿದು ಬಸ್ ಮೂಲಕ ಹುಬ್ಬಳ್ಳಿಗೆ ಹೊರಟಿದ್ದನು, ಆಗ ಈ ಘಟನೆ ನಡೆದಿದೆ.
ಹೌದು, ಆತ ಸುರದ್ರೂಪಿ ಯುವಕ. ಹೇಳಿ ಕೇಳಿ ಮಾಡೆಲ್. ಆತನ ಸೌಂದರ್ಯವೇ ಅವನಿಗೆ ಆಸ್ತಿ. ಆದರೆ ಬಸ್ ಅಡ್ಡ ಹಾಕಿದ ಎನ್ನುವ ಕಾರಣಕ್ಕೆ ಬಸ್ ಸಿಬ್ಬಂದಿಗಳು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಅಲ್ಲದೇ ಆತನ ಬಳಿಯಿದ್ದ ಮೊಬೈಲ್, ಬೆಲೆ ಬಾಳುವ ವಸ್ತುಗಳನ್ನು ಕೂಡ ದೋಚಿದ್ದಾರೆ. ಎನ್ನಲಾಗಿದೆ.
ಯುವ ಮಾಡೆಲ್ ಹೆಸರು ಧ್ರುವ ನಾಯ್ಕ್ ಅಂತ. ಈತ ಹುಬ್ಬಳ್ಳಿ ಮೂಲದವನು. ಹುಬ್ಬಳ್ಳಿಯ ಉದ್ಯಮಿಯೋರ್ವನ ಪುತ್ರ. ವಿದೇಶದಿಂದ ಬಂದಿದ್ದ ಈತ ಬೆಂಗಳೂರು ಏರ್ ಪೋರ್ಟ್ ನಲ್ಲಿ ಇಳಿದು ಬಸ್ ಮೂಲಕ ಹುಬ್ಬಳ್ಳಿಗೆ ಹೊರಟಿದ್ದನು, ಆಗ ಈ ಘಟನೆ ನಡೆದಿದೆ.
ಜುಲೈ 1 ರಾತ್ರಿಗೆ ಯುವಕ ಸೀ ಬರ್ಡ್ ಬಸ್ ಬುಕ್ ಮಾಡಿದ್ದನು. ರಾತ್ರಿ 11:30 ರ ವೇಳೆಗೆ ಆನಂದ ರಾವ್ ಸರ್ಕಲ್ ಬಸ್ ಪಿಕಪ್ ಇತ್ತು. ಬಸ್ ಇನ್ನೂ ಹೊರಟಿಲ್ವಲಾ ಅಂತ ಯುವಕ ಧಮ್ ಹೊಡಿಯೋಕೆ ಹೋಗಿದ್ದಾನೆ. ಈ ವೇಳೆ ಬಸ್ ಹೊರಟಿದ್ದು, ಧ್ರುವ ಬಸ್ ಅಡ್ಡ ಹಾಕಿ ಬಸ್ ಹತ್ತೋಕೆ ಹೋಗಿದ್ದಾನೆ. ಆಗ ಬಸ್ ಸಿಬ್ಬಂದಿ ಹಾಗೂ ಧ್ರುವನ ನಡುವೆ ಗಲಾಟೆಯಾಗಿದೆ.
ಬಸ್ ಸಿಬ್ಬಂದಿಗಳು ಸೇರಿಕೊಂಡು ಯುವಕನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಮುಖ, ಕತ್ತು, ಎದೆ ಭಾಗಕ್ಕೆ ಪರಚಿದ ಗಾಯಗಳಾಗಿದೆ. ಬೆನ್ನು ಮತ್ತು ಬುಜದ ಮೇಲ ಬಾಸುಂಡೆ ಬರುವಂತೆ ಥಳಿಸಿದ್ದಾರೆ.ಅಲ್ಲದೇ ಆತನ ಬಳಿಯಿದ್ದ ಬೆಲೆ ಬಾಳುವ ವಸ್ತು, ಹಣ ಕೂಡ ದೋಚಿದ್ದಾರೆ ಎನ್ನಲಾಗಿದೆ. ಬಸ್ ಹತ್ತುವ ವಿಚಾರಕ್ಕೆ ಮಾತ್ರ ಗಲಾಟೆ ಆಯ್ತೋ..ಅಥವಾ ಬೇರೆ ವಿಚಾರಕ್ಕೆ ಗಲಾಟೆ ನಡಿತೋ ಗೊತ್ತಿಲ್ಲ. ಘಟನೆ ಸಂಬಂಧ ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ತನಿಖೆಯಿಂದಷ್ಟೇ ಘಟನೆಯ ಸತ್ಯಾಂಶ ಹೊರಬರಬೇಕಿದೆ.