ಭಾರತದ ಮಾಜಿ ಕ್ರಿಕೆಟಿಗ ಮತ್ತು ತರಬೇತುದಾರ ಸಂಜಯ್ ಬಂಗಾರ್ ಅವರ ಪುತ್ರಿ ಕ್ರಿಕೆಟಿಗರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ.
ಖ್ಯಾತ ಕ್ರಿಕೆಟಿಗರು ನನಗೆ ನಗ್ನ ಫೋಟೋ ಕಳುಹಿಸುತ್ತಿದ್ದರು’ ಎಂದು ಸಂಜಯ್ ಬಾಂಗರ್ ಪುತ್ರಿ ಗಂಭೀರ ಆರೋಪ ಮಾಡಿದ್ದಾರೆ.
ಕಳೆದ ವರ್ಷ ಲಿಂಗ ಪರಿವರ್ತಿಸಿ ಹೆಣ್ಣಾಗಿ ಬದಲಾಗಿದ್ದ ಅನಾಯ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ಕೆಲ ಕ್ರಿಕೆಟಿಗರು ತಮ್ಮ ನಗ್ನ ಚಿತ್ರಗಳನ್ನು ನನಗೆ ಕಳುಹಿಸುತ್ತಿದ್ದರು. ಹಲವರು ಬಾ ಕಾರಿನಲ್ಲಿ ಹೋಗೋಣ , ನಿನ್ನ ಜೊತೆ ಮಲಗಬೇಕು ಬಾ ಎಂದು ಕರೆಯುತ್ತಿದ್ದರು ಎಂದು ಆರೋಪಿಸಿದ್ದಾರೆ.
ಸಂಜಯ್ ಬಂಗಾರ್ ಅವರ ಹಿರಿಯ ಪುತ್ರ ಆರ್ಯನ್ ಕಳೆದ ವರ್ಷ ಶಸ್ತ್ರಚಿಕಿತ್ಸೆ ಮಾಡಿಕೊಂಡ ನಂತರ ಹುಡುಗಿಯಾಗಿ ರೂಪಾಂತರಗೊಂಡಿದ್ದಾರೆ. ದೇಹದಲ್ಲಾಗುತ್ತಿದ್ದ ಪರಿವರ್ತನೆಯಿಂದಾಗಿ, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ನಿರ್ಧಾರಕ್ಕೆ ಬರಲಾಯಿತು. ನನ್ನ ನಿರ್ಧಾರ ನನಗೆ ತೃಪ್ತಿ ತಂದಿದೆ ಎಂದು ಅನಯಾ ಬಂಗಾರ್ ಹೇಳಿದ್ದರು.
ಈ ಹಿಂದೆ ಆರ್ಯನ್ ಎಂದು ಕರೆಯಲ್ಪಡುತ್ತಿದ್ದ ಅನಾಯಾ ಅಥ್ಲೀಟ್ ಆಗಿದ್ದು, ಸಂಜಯ್ ಬಂಗಾರ್ ಅವರ ಹೆಜ್ಜೆಗಳನ್ನು ಅನುಸರಿಸಿ ವಯೋಮಾನದ ಕ್ರಿಕೆಟ್ ಆಡಿದ್ದಾರೆ. ಆದರೆ ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆಯ ನಂತರ ಕ್ರಿಕೆಟ್ ವೃತ್ತಿಜೀವನವನ್ನು ಮುಂದುವರಿಸುವಲ್ಲಿ ಗಮನಾರ್ಹ ಅಡೆತಡೆಗಳಿವೆ ಎಂದು ಅನಾಯಾ ಬಹಿರಂಗಪಡಿಸಿದರು. ಅನಾಯಾ ಪ್ರಸ್ತುತ ಯುನೈಟೆಡ್ ಕಿಂಗ್ಡಮ್ನಲ್ಲಿ ವಾಸಿಸುತ್ತಿದ್ದಾರೆ.