ಬೆಂಗಳೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಆಸ್ತಿ ತೆರಿಗೆ ನಿಯಮ ಪ್ರಕಟಿಸಲಾಗಿದೆ. ಕೃಷಿಯೇತರ ವಸತಿ, ಕಟ್ಟಡಗಳಿಗೆ ಅನ್ವಯವಾಗಲಿದೆ. ಆಸ್ತಿಗಳ ಸಮೀಕ್ಷೆ ನಡೆಸಿ ತೆರಿಗೆ ವ್ಯಾಪ್ತಿಗೆ ಸೇರಿಸಲು ಸೂಚನೆ ನೀಡಲಾಗಿದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕೃಷಿ ತೆರಿಗೆಗೆ ಒಳಪಡದ ಎಲ್ಲಾ ವಸತಿ, ವಸತಿಯೇತರ, ವಾಣಿಜ್ಯ, ವಾಣಿಜ್ಯೇತರ ಕಟ್ಟಡ, ನಿವೇಶನ, ರೆಸಾರ್ಟ್ ಹೋಂ ಸ್ಟೇ ಸೇರಿ ಇತರೆ ಆಸ್ತಿಗಳನ್ನು ಗುರುತಿಸಿ ನಿಯಮ ಬದ್ಧವಾಗಿ ತೆರಿಗೆ ಮತ್ತು ಶುಲ್ಕಗಳ ವಸೂಲಿಗೆ ತಂದಿರುವ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್(ಗ್ರಾಮ ಪಂಚಾಯಿತಿಗಳ ತೆರಿಗೆ ದರ ಮತ್ತು ಫೀಸುಗಳು) ನಿಯಮ 2025 ಅನ್ನು ಸರ್ಕಾರ ಪ್ರಕಟಿಸಿದೆ.
ಹಾಲಿ ರಾಜ್ಯದ ಗ್ರಾಪಂ ವ್ಯಾಪ್ತಿಯಲ್ಲಿ ತೆರಿಗೆ ಶುಲ್ಕ ಮೂಲಕ 1,500 ಕೋಟಿ ರೂ. ಸಂಗ್ರಹವಾಗುತ್ತಿದ್ದು, ಹೊಸ ನಿಯಮಗಳ ನಷ್ಟದಿಂದ ಅಂದಾಜು 4500 ಕೋಟಿ ರೂ. ಸಂಗ್ರಹವಾಗುವ ನೀರಿಕ್ಷೆ ಇದೆ.
ಗ್ರಾಪಂ ವ್ಯಾಪ್ತಿಯಲ್ಲಿ ಧರ್ಮಾರ್ಥವಾಗಿ ನಡೆಸುವ ಆಸ್ಪತ್ರೆ, ಶಿಕ್ಷಣ ಸಂಸ್ಥೆ ಸೇರಿ ಇನ್ನಿತರ ಸಂಸ್ಥೆಗಳಿಗೆ ತೆರಿಗೆ ವಿನಾಯಿತಿ ನೀಡಲಾಗುವುದು. ಸೈನಿಕರು, ಮಾಜಿ ಸೈನಿಕರು, ಮೃತ ಸೈನಿಕರ ಪತ್ನಿಯರು, ವಿಶೇಷ ಚೇತನರು, ಸ್ವಸಹಾಯ ಗುಂಪುಗಳಿಗೆ ಸೇರಿದ ಆಸ್ತಿಗಳಿಗೆ ಶೇಕಡ 50ರಷ್ಟು ತೆರಿಗೆ ವಿನಾಯಿತಿ ನೀಡಲಾಗುವುದು. ಆರ್ಥಿಕ ವರ್ಷದ ಮೊದಲ ಮೂರು ತಿಂಗಳಲ್ಲಿ ತೆರಿಗೆ ಪಾವತಿಸಿದವರಿಗೆ ಶೇ. 5ರಷ್ಟು ವಿನಾಯಿತಿ ನೀಡಲಾಗುವುದು.