ಬೆಂಗಳೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ, ಕಂದಾಯ ಭೂಮಿಗಳಲ್ಲಿ ವಾಸವಾಗಿದ್ದು, ಕರ್ನಾಟಕ ಭೂಕಂದಾಯ ಕಾಯ್ದೆಯ ಅನ್ವಯ ಸಕ್ರಮಗೊಂಡ ನಿವೇಶನ ಮತ್ತು ಮನೆಗಳಿಗೆ ನೀಡಿದ ಇ- ಸ್ವತ್ತುಗಳಲ್ಲಿ ಮಾಲೀಕರ ಹೆಸರು ಸೇರ್ಪಡೆ ಮತ್ತು ಬದಲಾವಣೆಗೆ ಒಂದು ಸಾವಿರ ರೂಪಾಯಿ ಶುಲ್ಕ ವಿಧಿಸುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
ಸಕ್ರಮವಾದ ನಿವೇಶನ ಮನೆಗಳಿಗೆ ಅಧಿಕೃತ ಖಾತೆ ನೀಡಲು ಅನುಕೂಲವಾಗುವಂತೆ ಕಂದಾಯ ಇಲಾಖೆ ಇ- ಸ್ವತ್ತು ತಂತ್ರಾಂಶ ಅಭಿವೃದ್ದಿಪಡಿಸಿದ್ದು, ಎಲ್ಲ ಪಂಚಾಯಿತಿಗಳ ಪಿಡಿಒಗಳು ಇ- ತಂತ್ರಾಂಶದ ಮೂಲಕ ಇ- ಸ್ವತ್ತು ನಮೂನೆ 9 ಮತ್ತು ನಮೂನೆ 11ಎ ನೀಡಬೇಕು. ಆಸ್ತಿ ವಿವರಗಳ ಕಾಲಂನಲ್ಲಿ ಹೆಸರು ಸೇರ್ಪಡೆ, ಬದಲಾವಣೆಗೆ ವಿಧಿಸುವ ಶುಲ್ಕವನ್ನು ಇ- ಸ್ವತ್ತು ವಿತರಿಸಿದ ಒಂದು ವರ್ಷದೊಳಗೆ ಗರಿಷ್ಠ ನಾಲ್ಕು ಕಂತುಗಳಲ್ಲಿ ಸಂಗ್ರಹಿಸಬೇಕು ಎಂದು ಹೇಳಲಾಗಿದೆ.

