ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಿದವರೇ ರೌಡಿಶೀಟರ್: ಶೋಭಾ ಕರಂದ್ಲಾಜೆ ವಾಗ್ದಾಳಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಸ್ವಾಗತಕ್ಕೆ ಫೈಟರ್ ರವಿ ಬಂದಿದ್ದು, ಸ್ಥಳೀಯ ವ್ಯವಸ್ಥೆಯ ಲೋಪವೇ ಹೊರತು ಪ್ರಧಾನಿ ಅವರದ್ದಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಇದರಲ್ಲಿ ಪ್ರಧಾನಿ ಮೋದಿಯವರ ತಪ್ಪು ಏನೂ ಇಲ್ಲ ಎಂದು ಮೋದಿ ಸ್ವಾಗತಕ್ಕೆ ರೌಡಿಶೀಟರ್ ಬಂದಿರುವುದಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಆರೋಪಿಸಿದ್ದಕ್ಕೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.

ಮೋದಿ ಸ್ವಾಗತಕ್ಕೆ ಮಾತ್ರ ರೌಡಿಶೀಟರ್ ಬಂದಿದ್ದು, ಆದರೆ ಕಾಂಗ್ರೆಸ್ ಪಕ್ಷದಲ್ಲಿ ನೇತೃತ್ವ ವಹಿಸಿದವರೇ ರೌಡಿಶೀಟರ್. ಬಿಜೆಪಿ ವಿರುದ್ಧ ಆರೋಪ ಮಾಡುವ ನೈತಿಕತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.

ಫೈಟರ್ ರವಿ ಯಾರು ಎಂದು ಪ್ರಧಾನಿಯವರಿಗೆ ಗೊತ್ತಿಲ್ಲ. ಸ್ಥಳೀಯರ ಕಣ್ತಪ್ಪಿನಿಂದ ಈ ಲೋಪ ಆಗಿದೆ. ಪೊಲೀಸ್ ಅಧಿಕಾರಿಗಳು ಕೂಡ ಪ್ರಧಾನಿ ಸ್ವಾಗತಿಸಲು ಬರುವವರ ಪಟ್ಟಿ ಗಮನಿಸಬೇಕಿತ್ತು. ಅದು ಪ್ರಧಾನಿಯವರ ಜವಾಬ್ದಾರಿಯಲ್ಲ, ನಮ್ಮ ಲೋಪ, ಆ ಜವಾಬ್ದಾರಿ ನಮ್ಮದು. ಲೈನ್ ಅಪ್ ನಲ್ಲಿ ಅವರು ಹೇಗೆ ಬಂದರು ಎಂದು ತಿಳಿದು ಮುಂದೆ ಈ ರೀತಿ ಆಗದಂತೆ ಸರಿಪಡಿಸುತ್ತೇವೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read