ನವದೆಹಲಿ: ಮುಂದಿನ ಜನ್ಮ ಅಂತಿದ್ದರೆ ನಾನು ಮುಸ್ಲಿಂನಾಗಿ ಹುಟ್ಟಬೇಕು ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಅವರಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ. ಸಂಗಮೇಶ್ ಅವರೇ ಮುಂದಿನ ಜನ್ಮದವರೆಗೆ ಯಾಕೆ ಕಾಯ್ತೀರಾ? ಈ ಜನ್ಮದಲ್ಲೇ ಮುಸ್ಲಿಂ ಧರ್ಮಕ್ಕೆ ಹೋಗಿಬಿಡಿ ಎಂದಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ, ಇವರಿಗೆ ವೋಟ್ ಹಾಕಲು ಲಿಂಗಾಯಿತರು ಬೇಕು, ಹಿಂದೂಗಳು ಬೇಕು, ಒಕ್ಕಲಿಗರು ಬೇಕು, ಈಗ ಅವರಿಗೆ ಹಿಂದೂಗಳು ಬೇಡ. ಇಂತಹ ಹೇಳಿಕೆ ನೀಡಿ ಮತದಾರರಿಗೆ ಅವಮಾನ ಮಾಡುತ್ತಿದ್ದಾರೆ. ಓಲೈಕೆ ರಾಜಕಾರಣಕ್ಕಾಗಿ ಇಂತಹ ಮಾತುಗಳನ್ನು ಆಡಲು ನಾಚಿಕೆಯಾಗುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಸಂಗಮೇಶ್ ಅವರೇ ಮುಂದಿನ ಜನ್ಮದವರೆಗೆ ಕಾಯಬೇಡಿ ಈ ಜ್ನ್ಮದಲ್ಲೇ ಮುಸ್ಲಿಂ ಧರ್ಮಕ್ಕೆ ಹೋಗಿ. ನಾವು ನಿಮಗೆ ಹಾರ ಹಾಕಿ ಕಳುಹಿಸಿಕೊಡುತ್ತೇವೆ ಎಂದು ವಾಗ್ದಾಳಿ ನಡೆಸಿದ್ದಾರೆ.