ಸರ್ಜರಿ ಬಳಿಕ ಜಾಲಿ ಮೂಡ್ ನಲ್ಲಿ ನಟ ಶಿವರಾಜ್ ಕುಮಾರ್: ಪತ್ನಿಯೊಂದಿಗೆ ಅಮೆರಿಕಾದ ಕಡಲ ಕಿನಾರೆಯಲ್ಲಿ ಕಾಲಕಳೆದ ಶಿವಣ್ಣ

ನಟ ಶಿವರಾಜ್ ಕುಮಾರ್ ಅಮೆರಿಕಾದಲ್ಲಿ ಸರ್ಜರಿಗೆ ಒಳಪಟ್ಟ ಬಳಿಕ ಇದೀಗ ಗುಣಮುಖರಾಗಿದ್ದು, ಜಾಲಿ ಮೂಡ್ ನಲ್ಲಿದ್ದಾರೆ. ಅಮೆರಿಕದ ಕಡಲ ಕಿನಾರೆಯಲ್ಲಿ ಪತ್ನಿ ಜೊತೆ ಕಾಲ ಕಳೆದಿದ್ದಾರೆ.

ಸರ್ಜರಿ ಬಳಿಕ ಗುಣಮುಖರಾಗಿರುವ ಶಿವರಾಜ್ ಕುಮಾರ್, ಪತ್ನಿ ಗೀತಾ ಜೊತೆ ಬಿಡುವಿನ ಸಮಯದಲ್ಲಿ ಅಮೆರಿಕಾದ ಸುಂದರ ತಾಣಗಳಿಗೆ ಭೇಟಿ ನೀಡಿದ್ದಾರೆ. ಅಮೆರಿಕಾದ ಸಮುದ್ರ ತಟದಲ್ಲಿ ಕಡಲಿನ ವಿಹಂಗಮ ನೋಟ ವೀಕ್ಷೀತ್ತಿರುವ ಹಾಗೂ ಪತ್ನಿ ಗೀತಾ ಜೊತೆ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿರುವ ಶಿವರಾಜ್ ಕುಮಾರ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜನವರಿ 26ರಂದು ಶಿವರಾಜ್ ಕುಮಾರ್ ಬೆಂಗಳೂರಿಗೆ ವಾಪಾಸ್ ಆಗಲಿದ್ದಾರೆ. ಬಳಿಕ ಮತ್ತೆ ಸಿನಿಮಾ, ಚಿತ್ರೀಕರಣಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read