ಶಿವಮೊಗ್ಗ: ಶಿವಮೊಗ್ಗದ ಸಕ್ರೆಬೈಲು ಆನೆ ಶಿಬಿರದ ಬಾಲಣ್ಣ ಆನೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಅದರ ಬಲಕಿವಿಯಲ್ಲಿ ಗ್ಯಾಂಗ್ರಿನ್ ಸೋಂಕು ಉಂಟಾಗಿದೆ. ಇದರಿಂದಾಗಿ ವೈದ್ಯರು ಆನೆಯ ಕಿವಿ ಕತ್ತರಿಸಿ ತೆಗೆದು ಚಿಕಿತ್ಸೆ ನೀಡಿದ್ದಾರೆ.
ಗ್ಯಾಂಗ್ರಿನ್ ಸೋಂಕಿನಿಂದಾಗಿ ಬಾಲಣ್ಣ ಆನೆಯ ಬಲ ಕಿವಿಯ ಭಾಗವನ್ನುವೈದ್ಯರು ಕತ್ತರಿಸಿ ತೆಗೆದಿದ್ದಾರೆ. ಗ್ಯಾಂಗ್ರಿನ್ ನಿಂದಾಗಿ ಆನೆಯ ಬಲಕಿವಿ ಸಂಪೂರ್ಣ ಕಪ್ಪಗಾಗಿ, ಕ್ವು ಸೋರುತ್ತಿತ್ತು. ಈ ಹಿನ್ನೆಲೆಯಲ್ಲಿ ಆನೆಗೆ ತುರ್ತು ಚಿಕಿತ್ಸೆ ನೀಡಲು ಬೆಂಗಳೂರಿನಿಂದ ಸಕ್ರೆಬೈಲು ಆನೆ ಶಿಬಿರಕ್ಕೆ ಬಂದಿದ್ದ ಡಾ.ಚೆಟ್ಟಿಯಪ್ಪ, ಡಾ.ರಮೇಶ್ ಸೇರಿದಂತೆ ಐವರು ವೈದ್ಯರ ತಂಡ, ಆನೆ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ಆರಂಭಿಸಿದ್ದಾರೆ.
ಬಾಲಣ್ಣ ಆನೆಗೆ ಸೋಂಕು ತೀವ್ರವಾಗಿತ್ತು ಅಲ್ಲದೇ ಗ್ರಾಂಗ್ರಿನ್ ಆನೆ ದೇಹದ ಇತರ ಭಾಗಗಳಿಗೆ ಹರಡುವುದನ್ನು ತಡೆಯಲು ಆನೆಯ ಬಲಕಿವಿಯನ್ನು ಕತ್ತರಿಸಿ ತೆಗೆಯಲಾಗಿದೆ.
