ಶಿವಮೊಗ್ಗ: ಮಹಿಳೆಯೋರ್ವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಶಿವಮೊಗ್ಗದ ಸಿದ್ದೇಶ್ವರ ನಗರದಲ್ಲಿ ನಡೆದಿದೆ.
45 ವರ್ಷದ ಗಂಗಮ್ಮ ಕೊಲೆಯಾದ ಮಹಿಳೆ. ಹಳೆ ದ್ವೇಷದ ಕಾರಣಕ್ಕೆ ಗಂಗಮ್ಮ ಅವರನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ತುಂಗಾನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಾಗೇಶ್ ನಾಯ್ಕ್ ಹಾಗೂ ಹರೀಶ್ ಎಂಬುವವರು ಬಂಧಿತ ಆರೋಪಿಗಳು.
