ಶಿವಮೊಗ್ಗ: 11 ವರ್ಷದ ಮಗಳನ್ನೇ ಹೆತ್ತ ತಾಯಿಯೊಬ್ಬಳು ಬರ್ಬರವಾಗಿ ಹತ್ಯೆಗೈದು ಬಳಿಕ ತಾನೂ ನೇಣಿಗೆ ಶರಣಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
11 ವರ್ಷದ ಮಗಳು ಪೂರ್ವಿಕಾಳನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದಿರುವ ಮಹಿಳೆ ಬಳಿಕ ಫ್ಯಾನ್ ಗೆ ನೇಣು ಬಿಗಿದುಕೊಂಡು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಬಳಿಯೇ ಈ ಘಟನೆ ನಡೆದಿದೆ.
ಶರಾವತಿ ನಗರದಲ್ಲಿರುವ ಜಿಲ್ಲಾಸ್ಪತ್ರೆಯ ಕ್ವಾರ್ಟರ್ಸ್ ನಲ್ಲಿ ಈ ಘಟನೆ ನಡೆದಿದೆ. ೩೬ ವರ್ಷದ ಶೃತಿ ಮಗಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕಿಒಂಡಿರುವ ಮಹಿಳೆ. ಶೃತಿ ಮಾನಸಿಕ ಅಸ್ವಸ್ಥರಾಗಿದ್ದರು. ಹೆತ್ತ ಮಗಳನ್ನೇ ಕೊಚ್ಚಿ ಕೊಲೆಗೈಯ್ಯುವ ಹಂತಕ್ಕೆ ಸ್ಥಿಮಿತ ಕಳೆದುಕೊಂಡಿದ್ದ ಮಹಿಳೆ ಕೃತ್ಯದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.