ಶಿವಮೊಗ್ಗ: ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಅಕ್ರಮವಾಗಿ ಮಾದಕವಸ್ತುಗಳ ಸಾಗಾಟ ಯತ್ನ ನಿರಂತರವಾಗಿ ನಡೆಯುತ್ತಿದೆ. ವ್ಯಕ್ತಿಯೋರ್ವ ಪ್ಯಾಂಟ್ ಜೇಬಿನಲ್ಲಿ ಗಾಂಜಾ ಇಟ್ಟುಕೊಂಡು ಬಂದು ಸಾಗಿಸುತ್ತಿದ್ದ ವೇಳೆ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ.
ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿಯನ್ನು ನೋಡಲು ಬಂದಿದ್ದ ವ್ಯಕ್ತಿ ಪ್ಯಾಂಟಿನ ಜೇಬಿನಲ್ಲಿ ಗಾಂಜಾ ಸಾಗಿಸುತ್ತಿದ್ದ. ಶಕೀಬ್ ಬಂಧಿತ ಆರೋಪಿ. ಕೈದಿ ಅಶೋಕ್ ನನ್ನು ಭೇಟಿಯಾಗಲೆಂದು ಬಂದಿದ್ದ ವೇಳೆ ತಪಾಸಣೆ ನಡೆಸಿದಾಗ ಆತನ ಜೇಬಿನಲ್ಲಿ ಗಾಂಜಾ ಪತ್ತೆಯಾಗಿದೆ. ಕೈದಿಗೆ ತಂದಿದ್ದ ನಾಲ್ಕು ಜೀನ್ಸ್ ಪ್ಯಾಂಟ್ ಗಳ ಜೇಬು, ಸೊಂಟದ ಪಟ್ಟಿಯೊಳಗೆ ಹಾಗೂ ಜಿಪ್ ಪಟ್ಟಿಯಲ್ಲಿನ್ ಗಾಂಜಾ ಪತ್ತೆಯಾಗಿದೆ.
ಶಕೀಬ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಈ ವೇಳೆ ಆತನ ಬಳಿಕ 9,910 ರೂ ನಗದು ಹಣ ಪತ್ತೆಯಾಗಿದೆ. ಪೊಲೀಸರು ಶಕೀಬ್ ಸಮೇತ ಹಣ, ಗಾಂಜಾ, ಮಾರುತಿ ಸುಜುಕಿ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.
