ಶಿವಮೊಗ್ಗ: ಶಿವಮೊಗ್ಗದಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಹೆರಿಗೆಯಾಗಿ ಮಗುವಿಗೆ ಜನ್ಮ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ವಿಷಯ ಬಯಲಾಗಿದೆ.
9ನೇ ತರಗತಿ ವಿದ್ಯಾರ್ಥಿನಿ ಮನೆಯಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಏಳು ತಿಂಗಳಿಗೆ ಬಾಲಕಿ ಹೆರಿಗೆಯಾಗಿದ್ದಾಳೆ. ಮಗು ಹಾಗೂ ತಾಯಿ ಇಬ್ಬರನ್ನೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿದ್ಯಾರ್ಥಿ ಬದ್ಕನ್ನು ಹಾಳು ಮಾಡಿದ ದುರುಳ ಬೇರಾರೂ ಅಲ್ಲ ಸ್ವಂತ ಸಹೋದರ ಎಂಬ ಅಂಶ ಬಯಲಾಗಿದೆ. ಸ್ವಂತ ಸಹೋದರನೇ ಬಾಲಕಿ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಗರ್ಭವತಿಯನ್ನಾಗಿ ಮಾಡಿ ಏಳು ತಿಂಗಳಿಗೆ ಹೆರಿಗೆಯಾಗುವಂತಹ ಸ್ಥಿತಿ ತಂದಿದ್ದಾನೆ.
16 ವರ್ಷದ ಬಾಲಕನ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ. ಇನ್ನು ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕ 9ನೇ ತರಗತಿವರೆಗೆ ಓದಿ ಬಳಿಕ ಶಾಲೆ ಬಿಟ್ಟು ಮನೆಯಲ್ಲಿಯೇ ಇದ್ದ. ಪೋಷಕರು ಕೆಲಸಕ್ಕೆ ಹೋದಾಗ ಅಣ್ಣನೇ ತನ್ನ ಮೇಲೆ ಅತ್ಯಾಚಾರವೆಸಗುತ್ತಿದ್ದ. ಮನೆಯಲ್ಲಿ ವಿಷಯ ಹೇಳದಂತೆ ಹೆದರಿಸಿದ್ದ ಎಂದಿ ಬಾಲಕಿ ಈಗ ಬಾಯ್ಬಿಟ್ಟಿದ್ದಾಲೆ.
ಒಮ್ಮೆ ಹೊಟ್ಟೆನೋವು ಬಂದಾಗ ಅಮ್ಮ ಮಾತ್ರೆ ತಂದುಕೊಟ್ಟಿದ್ದರು. ಶಾಲೆಯ ಯುನಿಫಾರ್ಮ್ ಮೇಲೆ ಕೋಟ್ ಇರುವುದರಿಂದ ಹೊಟ್ಟೆ ಕಾಣುತ್ತಿರಲಿಲ್ಲ. ಹಾಗಾಗಿ ಯಾರಿಗೂ ಗೊತ್ತಾಗಿರಲಿಲ್ಲ ಎಂದು ಸಂತ್ರಸ್ತೆ ಹೇಳಿದ್ದಾಳೆ. ಸ್ವಂತ ಅಣ್ಣನೇ ತಂಗಿಯ ಮೇಲೆ ಅತ್ಯಾಚಾರವೆಸಗಿ ಗರ್ಭವತಿಯನ್ನಾಗಿ ಮಾಡಿ ಮಗುವಿಗೆ ಜನ್ಮ ನೀಡಿದ್ದು, ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.