ಶಿವಮೊಗ್ಗದಲ್ಲಿ ನಾಪತ್ತೆಯಾಗಿದ್ದ ಐವರು ಮಕ್ಕಳು ಪತ್ತೆ

ಶಿವಮೊಗ್ಗ: ನಾಪತ್ತೆಯಾಗಿದ ಐವರು ವಿದ್ಯಾರ್ಥಿಗಳು ಪತ್ತೆಯಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಮೀನು ಹಿಡಿಯಲು ಹೋಗಿದ್ದಕ್ಕೆ ಮನೆಯಲ್ಲಿ ಬೈಯ್ಯುತ್ತಾರೆ ಎಂದು ಭಯಗೊಂಡು ರಾತ್ರಿಯಿಡಿ ಗ್ರಾಮದ ದೇವಾಸ್ಥಾನದ ಬಳಿಯೇ ಐವರು ಮಕ್ಕಳು ಉಳಿದುಕೊಂಡಿದ್ದರು. ರಾತ್ರಿ ಯಾದರೂ ಮಕ್ಕಳು ಮನೆಗೆ ಬಾರದ ಕಾರಣ ಆತಂಕಗೊಂಡ ಪೋಷಕರು ಭದ್ರಾವತಿ ಪೊಲೀಸರಿಗೆ ದೂರು ನೀಡಿದ್ದಾರೆ.

ರಾತ್ರಿಯಿಡಿ ಮಕ್ಕಳಿಗಾಗಿ ಪೊಲೀಸರು ಹುಡುಕಾಟ ನಡೆಸಿದರು ಸುಳಿವಿಲ್ಲ. ಬೆಳಿಗ್ಗೆಯಾಗುತ್ತಲೇ ದೇವಸ್ಥಾನದ ಬಳಿ ಐವರು ಮಕ್ಕಳು ಪತ್ತೆಯಾಗಿದ್ದಾರೆ. ಪೊಲೀಸರ ಜೊತೆ ಪೋಷಕರನ್ನು ನೋಡುತ್ತಿದ್ದಂತೆ ಇಬ್ಬರು ಮಕ್ಕಳು ಓಡಿಹೋಗಿದ್ದಾರೆ. ಮೂವರು ಮಕ್ಕಳನ್ನು ಕರೆತಂದು ವಿಚಾರಿಸಲಾಗಿದೆ. ಸದ್ಯ ಮಕ್ಕಳು ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read