ಮುಂಬೈ : ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಶಾಸಕ ಸಂಜಯ್ ಗಾಯಕ್ವಾಡ್ ಅವರು 37 ವರ್ಷಗಳ ಹಿಂದೆ ಹುಲಿಯನ್ನು ಬೇಟೆಯಾಡಿದ್ದರು ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ವಿದರ್ಭ ಪ್ರದೇಶದ ಬುಲ್ಧಾನಾ ಕ್ಷೇತ್ರವನ್ನು ಪ್ರತಿನಿಧಿಸುವ ಸಂಜಯ್ ಗಾಯಕ್ವಾಡ್ ಈ ಹೇಳಿಕೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. “ಇದು ಹುಲಿಯ ಹಲ್ಲು. 1987 ರಲ್ಲಿ, ನಾನು ಅದನ್ನು ಬೇಟೆಯಾಡಿ ಅದನ್ನು (ಹಲ್ಲು) ತೆಗೆದುಹಾಕಿದ್ದೆ” ಎಂದು ಗಾಯಕ್ವಾಡ್ ಹೇಳಿದರು.
ಛತ್ರಪತಿ ಶಿವಾಜಿ ಮಹಾರಾಜ್ ಅವರ ಜನ್ಮ ದಿನಾಚರಣೆಯಾದ ಶಿವ ಜಯಂತಿಯ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಶಿವಸೇನೆಯ ಪ್ರತಿಸ್ಪರ್ಧಿ ಉದ್ಧವ್ ಠಾಕ್ರೆ ಬಣದ ಮುಖವಾಣಿ ಸಾಮ್ನಾ ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ.
ಹುಲಿಗಳನ್ನು ಬೇಟೆಯಾಡುವುದನ್ನು 1987 ಕ್ಕಿಂತ ಮೊದಲೇ ದೇಶದಲ್ಲಿ ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲಾಗಿತ್ತು.
https://twitter.com/SaamanaOnline/status/1760575854869143651?ref_src=twsrc%5Etfw%7Ctwcamp%5Etweetembed%7Ctwterm%5E1760575854869143651%7Ctwgr%5E124ff878bf44b085c48ae7c52aba47b5b37bae6b%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fforyou