ಶಿವಮೊಗ್ಗ : ವಾಹನ ಸವಾರರ ಗಮನಕ್ಕೆ, ನಗರದ ಈ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧ

ಶಿವಮೊಗ್ಗ : ಶಿವಮೊಗ್ಗ ನಗರದ ಪೂರ್ವ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸವಳಂಗ ರಸ್ತೆಯಲ್ಲಿ ಕರ್ನಾಟಕ ಸಂಘ ಸಿಗ್ನಲ್ನಿಂದ ಉಷಾ ನರ್ಸಿಂಗ್ ಹೋಂವರೆಗೆ ಸುಗಮ ಸಂಚಾರ ದೃಷ್ಠಿಯಿಂದ ದ್ವಿಚಕ್ರ ಮತ್ತು ಕಾರ್ಗಳ ಪಾರ್ಕಿಂಗ್ಗೆ ಕೆಳಕಂಡಂತೆ ಕ್ರಮ ಕೈಗೊಂಡು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್. ರವರು ಅಧಿಸೂಚನೆ ಹೊರಡಿಸಿ ಕೆಳಕಂಡಂತೆ ಆದೇಶ ನೀಡಿರುತ್ತಾರೆ.

ವಾಹನಗಳ ನಿಲುಗಡೆ ನಿಷೇಧಿತ ಸ್ಥಳ (ನೋ ಪಾರ್ಕಿಂಗ್); ಬಸವೇಶ್ವರ (ಡಿವಿಎಸ್) ಸರ್ಕಲ್ನ ಸುತ್ತ 50 ಮೀ, ಮಹಾವೀರ ಸರ್ಕಲ್ನ ಸುತ್ತ 50 ಮೀ., ಶಿವಮೂರ್ತಿ ಸರ್ಕಲ್ ಸುತ್ತ 50 ಮೀ, ಅಕ್ಕಮಹಾದೇವಿ (ಉಷಾ ನರ್ಸಿಂಗ್ ಹೋಂ) ಸರ್ಕಲ್ ಸುತ್ತ 50 ಮೀ ಹಾಗೂ ಕಮಲಾ ನರ್ಸಿಂಗ್ ಹೋಂನಿಂದ ಗಾಂಧಿನಗರ ಕ್ರಾಸ್ವರೆಗೆ ಎಲ್ಲಾ ವಾಹನಗಳ ನಿಲುಗಡೆ ನಿಷೇದಿಸಲಾಗಿದೆ.

ದ್ವಿ-ಚಕ್ರ ವಾಹನಗಳ ನಿಲುಗಡೆ ಸ್ಥಳ (ಪಾರ್ಕಿಂಗ್): ಮೋರ್ ಸೂಪರ್ ಮಾರ್ಕೇಟ್ನಿಂದ ಶಿವಮೊಗ್ಗ ಡ್ರಗ್ ಹೌಸ್ವರೆಗೆ ಎಡಬದಿ, ಪದ್ಮ ಜ್ಯೂವೆಲ್ಲರಿ ಯಿಂದ ಸುಶೋಧ ಆಸ್ಪತ್ರೆವರೆಗೆ ಎಡಬದಿ ಮತ್ತು ವಿಜಯ ಕಾಂಪ್ಲೇಕ್ಸ್ ನಿಂದ ಬೀಬಾ ಶಾಪ್ವರೆಗೆ ಬಲಬದಿ ದ್ವಿ-ಚಕ್ರ ವಾಹನಗಳ ನಿಲುಗಡೆ ಮಾಡಬಹುದಾಗಿದೆ.

ನಾಲ್ಕು ಚಕ್ರ ವಾಹನಗಳ ನಿಲುಗಡೆ ಸ್ಥಳ (ಪಾರ್ಕಿಂಗ್): ಚನ್ನಪ್ಪ ಲೇಔಟ್ 2ನೇ ಕ್ರಾಸ್ ಯಿಂದ ಕಮಲಾ ನರ್ಸಿಂಗ್ ಹೋಂವರೆಗೆ ಎಡಬದಿ, ವೆಸ್ಟ್ಸೈಡ್ ಕಾಂಪ್ಲೇಕ್ಸ್ (ಜಯನಗರ 2ನೇ ಪ್ಯಾರಲಲ್ ರಸ್ತೆ) ನಿಂದ ಫೈರ್ ಫಾಕ್ಸ್ ಸೈಕಲೋತ್ಸವವರೆಗೆ ಬಲಬದಿ ಕಾರ್ಗಳನ್ನು ನಿಲುಗಡೆ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ಸೂಚಿಸಿರುತ್ತಾರೆ.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read