ಜಪಾನ್ ಪ್ರಧಾನಿಯಾಗಿ ಶಿಗೆರು ಇಶಿಬಾ ಆಯ್ಕೆ

ಟೋಕಿಯೋ: ಜಪಾನ್ ಮುಂದಿನ ಪ್ರಧಾನಿಯಾಗಿ ಮಾಜಿ ರಕ್ಷಣಾ ಸಚಿವ ಶಿಗೆರು ಇಶಿಬಾ ಶುಕ್ರವಾರ ಆಯ್ಕೆಯಾಗಿದ್ದಾರೆ.

ಫ್ಯೂಮಿಯೋ ಕಿಶಿಡಾಡ ಅವರ ಬಳಿಕ ಪ್ರಧಾನಿಯಾಗಲು 9 ಅಭ್ಯರ್ಥಿಗಳ ನಡುವೆ ಪೈಪೋಟಿ ನಡೆದಿದ್ದು, ಶಿಗೆರು ಇಶಿಬಾ ಗೆಲುವು ಸಾಧಿಸಿದ್ದಾರೆ. ಅಕ್ಟೋಬರ್ 1ರಂದು ಶಿಗೆರು ಜಪಾನಿನ 102ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಭ್ರಷ್ಟಾಚಾರ ಆರೋಪಗಳ ಕಾರಣ ಹಾಲಿ ಪ್ರಧಾನಿ ಕಿಶಿಡಾ ಹುದ್ದೆ ತೊರೆಯುವುದಾಗಿ ಘೋಷಿಸಿದ್ದು ಅಕ್ಟೋಬರ್ 1ರಂದು ಅಧಿಕಾರ ಹಸ್ತಾಂತರ ಮಾಡಲಿದ್ದಾರೆ.

ಜಪಾನ್ ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ನಾಯಕನ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆದಿತ್ತು. ಜಪಾನ್ ಮೊದಲ ಮಹಿಳಾ ಪ್ರಧಾನಿಯಾಗಲು ಕಣಕ್ಕೆ ಇಳಿದಿದ್ದ ಸಚಿವೆ ಸಾನೆ ತಕೈಚಿ ಸೇರಿ ಎಂಟು ಮಂದಿಯನ್ನು ಮಣಿಸಿದ ಶಿಗೆರು ಪ್ರಧಾನಿ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಸಂಸತ್ತಿನ ಅನುಮೋದನೆಯ ಬಳಿಕ ಹೊಸ ಪ್ರಧಾನಿ ನೂತನ ಸಚಿವ ಸಂಪುಟ ರಚಿಸಲಿದ್ದಾರೆ. 2025ರವರೆಗೆ ಜಪಾನ್ ಕೆಳಮನೆಯ ಪ್ರಸ್ತುತ ಅಧಿಕಾರ ಅವಧಿ ಇದೆ. ಇನ್ನೊಂದು ವರ್ಷದೊಳಗೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ.

2022ರ ಜುಲೈ 28ರಂದು ಲಿಬರಲ್ ಡೆಮಾಕ್ರಟಿಕ್ ಪಾರ್ಟಿಯ ಜನಪ್ರಿಯ ನಾಯಕರಾಗಿದ್ದ ಮಾಜಿ ಪ್ರಧಾನಿ ಶಿಂಜೊ ಅಬೆ ಅವರನ್ನು ಹತ್ಯೆ ಮಾಡಲಾಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read