ಬೆಂಗಳೂರು: ದೆಹಲಿ-ಕಾನ್ಪುರ ಶತಾಬ್ದಿ ರೈಲಿನ ಎಸಿ ಕೋಚ್ ನಲ್ಲಿ ಹೋಳಿ ಆಚರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಆರ್ ಸಿ ಟಿಸಿಯ ಪ್ಯಾಂಟ್ರಿ ಹಾಗೂ ಸ್ವಚ್ಛತಾ ಸಿಬ್ಬಂದಿಗಳನ್ನು ಬಂಧಿಸಲಾಗಿದೆ.
ರೈಲಿನ ಎಸಿ ಕೋಚ್ ನಲ್ಲಿ ಹೋಳಿ ಆಚರಿಸಿದ್ದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಕಾನುರದಲ್ಲಿ ಆರ್ ಪಿ ಎಫ್ ಪೊಲೀಸರು, ಐಆರ್ ಸಿ ಟಿಸಿಯ ಪ್ಯಾಂಟ್ರಿ ಹಾಗೂ ಸ್ವಚ್ಛತಾ ಸಿಬ್ಬಂದಿಗಳನ್ನು ಬಂಧಿಸಿದ್ದಾರೆ.
ಮಾರ್ಚ್ 14ರಂದು ಘಟನೆ ನಡೆದಿತ್ತು. ರೈಲಿನ ಸಿಬ್ಬಂದಿ ಎಸಿ ಕೋಚ್ ನಲ್ಲಿ ಬಣ್ಣ ಎರಚಿ ಹೋಳಿ ಆಡಿದ್ದರು. ಇದರಿಂದ ಹಲವು ಪ್ರಯಾಣಿಕರಿಗೂ ತ್ಂದರೆಯಾಗಿತ್ತು. ಅಲ್ಲದೇ ರೈಲಿನ ಕೋಚ್ ನ ಸ್ವಚ್ಛತೆಗೂ ಧಕ್ಕೆಯಾಗಿತ್ತು. ಇನ್ ಸ್ಟಾಗ್ರಾಂ ಬಳಕೆದಾರರೊಬ್ಬರು ಆರ್ ಇ ಎಫ್ ಅಧಿಕಾರಿಗಳಿಗೆ ಘಟನೆಯ ವಿಡಿಯೋ ಕಳುಹಿಸಿ ಕ್ರಮವಹಿಸುವಂತೆ ಆಗ್ರಹಿಸಿದ್ದರು.
ರೈಲಿನ ಆಸ್ತಿ-ಪಾಸ್ತಿ ಹಾನಿ ಎಂದು ಪ್ರಕರಣ ದಾಖಲಿಸಿ ಸಿಬ್ಬಂದಿಗಳನ್ನು ಬಂಧಿಸಲಾಗಿದೆ.