ಸಾರ್ವಜನಿಕ ಪ್ರದೇಶಗಳಲ್ಲಿ ವಾಶ್ರೂಮ್ ಮತ್ತಿತರ ಸ್ಥಳಗಳನ್ನು ಉಪಯೋಗಿಸಲು ಮಹಿಳೆಯರು ಭಯಪಡುವಂತಹ ಪರಿಸ್ಥಿತಿ ಇದೆ. ಬಟ್ಟೆ ಬದಲಿಸಿಕೊಳ್ಳುವ ಡ್ರೆಸ್ ರೂಮ್ ಇರಬಹುದು ಅಥವಾ ವಾಶ್ರೂಮ್ ಇರಬಹುದು ಇಲ್ಲೆಲ್ಲ ಕಾಣದಂತೆ ಯಾರು ಮೊಬೈಲ್ ಕ್ಯಾಮರಾ ಇಟ್ಟು ರೆಕಾರ್ಡ್ ಮಾಡುತ್ತಾರೋ ಎಂಬ ಆತಂಕ ಸದಾ ಕಾಲ ಕಾಡುತ್ತಿರುತ್ತದೆ.
ಇದಕ್ಕೆ ಪುಷ್ಠಿ ನೀಡುವಂತೆ ಈಗಾಗಲೇ ಹಲವು ಪ್ರಕರಣಗಳು ನಡೆದಿದ್ದು, ಇದಕ್ಕೆ ಈಗ ಮತ್ತೊಂದು ಘಟನೆ ಸೇರ್ಪಡೆಯಾಗಿದೆ. ಡೆಹರಾಡೂನ್ ನಲ್ಲಿ ಈ ಘಟನೆ ನಡೆದಿದ್ದು ಅಲ್ಲಿನ ಪ್ರತಿಷ್ಠಿತ ಆನಂದಂ ರೆಸ್ಟೋರೆಂಟ್ ನ ಲೇಡಿಸ್ ವಾಶ್ರೂಮ್ ನ ಸೀಲಿಂಗ್ ನಲ್ಲಿ ಮೊಬೈಲ್ ಕ್ಯಾಮೆರಾ ಅಡಗಿಸಿಟ್ಟಿದ್ದ ನೌಕರನೊಬ್ಬ ಅಲ್ಲಿನ ದೃಶ್ಯಗಳನ್ನು ರೆಕಾರ್ಡ್ ಮಾಡುತ್ತಿದ್ದ.
ಇತ್ತೀಚೆಗೆ ಕುಟುಂಬದೊಂದಿಗೆ ರೆಸ್ಟೋರೆಂಟ್ ಗೆ ತೆರಳಿದ್ದ ಮಹಿಳೆಯೊಬ್ಬರು ವಾಶ್ ರೂಮ್ ಬಳಸಲು ತೆರಳಿದ್ದು, ಈ ವೇಳೆ ಅವರಿಗೆ ಅನುಮಾನ ಬಂದಿದೆ. ಆಗ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಸೀಲಿಂಗ್ ನಲ್ಲಿ ಮೊಬೈಲ್ ಕ್ಯಾಮೆರಾ ಇಟ್ಟಿದ್ದು ಬೆಳಕಿಗೆ ಬಂದಿದೆ. ಕೂಡಲೇ ಅವರು ರೆಸ್ಟೋರೆಂಟ್ ಸಿಬ್ಬಂದಿ ಗಮನಕ್ಕೆ ತಂದಿದ್ದು ಬಳಿಕ ಆಗಮಿಸಿದ ಪೊಲೀಸರು ಅಲ್ಲಿನ ನೌಕರ ವಿನೋದ್ ಎಂಬಾತನನ್ನು ಬಂಧಿಸಿದ್ದಾರೆ.
ವಿನೋದ್ ಮೊಬೈಲ್ ಫೋನ್ ಗಮನಿಸಿದಾಗ ಲೇಡೀಸ್ ವಾಶ್ರೂಮ್ ನಲ್ಲಿ ಸೆರೆಯಾಗಿದ್ದ ಹಲವು ಮಹಿಳೆಯರ ವಿಡಿಯೋಗಳು ಕಂಡುಬಂದಿದ್ದು, ಇವುಗಳನ್ನು ಯಾರಿಗಾದರೂ ರವಾನಿಸಲಾಗಿದೆಯಾ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಈ ಘಟನೆ ಬಳಿಕ ರೆಸ್ಟೋರೆಂಟ್ ಗೆ ತೆರಳುತ್ತಿದ್ದ ಹಲವರಿಗೆ ಆತಂಕವಾಗಿದ್ದು, ಎಲ್ಲಿ ತಮ್ಮ ವಿಡಿಯೋ ಸಹ ರೆಕಾರ್ಡ್ ಆಗಿದೆಯೋ ಎಂಬ ಭೀತಿ ಆವರಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಘಟನೆಯನ್ನು ಖಂಡಿಸಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು ಆರೋಪಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.
https://twitter.com/SachinGuptaUP/status/1824387159949734310?ref_src=twsrc%5Etfw%7Ctwcamp%5Etweetembed%7Ctwterm%5E1824387159949734310%7Ctwgr%5Edf54ee48