BIG NEWS: ‘ಸ್ವಾಮಿ ಮಂಜುನಾಥನನ್ನು ರಕ್ಷಿಸಿ; ಅಪಪ್ರಚಾರಿಗಳನ್ನು ಶಿಕ್ಷಿಸಿ’: ಪ್ಲೇಕಾರ್ಡ್ ಹಿಡಿದು ಸದನಕ್ಕೆ ಬಂದ ಶಾಸಕ ಶರಣಗೌಡ ಕಂದಕೂರ್

ಬೆಂಗಳೂರು: ಧರ್ಮಸ್ಥಳ ಪ್ರಕರಣದ ಬಗ್ಗೆ ಎಸ್ ಐಟಿ ತನಿಖೆ ಚುರುಕುಗೊಳಿಸಿದ್ದು, ಈ ನಡುವೆ ಇಂದು ಸದನದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಉತ್ತರ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್ ಪ್ಲೇಕಾರ್ಡ್ ಹಿಡಿದು ಸದನಕ್ಕೆ ಆಗಮಿಸಿರುವ ಘಟನೆ ನಡೆದಿದೆ.

‘ಸ್ವಾಮಿ ಮಂಜುನಾಥನನ್ನು ರಕ್ಷಿಸಿ; ಅಪಪ್ರಚಾರಿಗಳನ್ನು ಶಿಕ್ಷಿಸಿ; ಸತ್ಯಮೇವ ಜಯತೇ’ ಎಂದು ಬರೆದಿರುವ ಪ್ಲೇಕಾರ್ಡ್ ಹಿಡಿದು ಶಾಸಕ ಕಂದಕೂರು ವಿಧಾನಸಭೆಗೆ ಆಗಮಿಸಿದ್ದಾರೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿರುವವರನ್ನು ಹಿಡಿದು ಶಿಕ್ಷಿಸಬೇಕು. ಅಪಪ್ರಚಾರದ ಬಗ್ಗೆ ಸರ್ಕಾರ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು. ಸರ್ಕಾರ ಈ ವಿಷಯದ ಬಗ್ಗೆ ಜನರಿಗೆ ತಿಳಿಸಿ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಎಲ್ಲಾ ಜನಾಂಗದವರಿಗೆ ಸೇರಿದವರು. ಕ್ಷೇತ್ರದ ಬಗ್ಗೆ ನಡೆಯುತ್ತಿರುವ ಅಪಪ್ರಚಾರ ಸಹಿಸಲು ಸಾಧ್ಯವಿಲ್ಲ. ಈ ವಿಚಾರವಾಗಿ ರಾಜಕೀಯ ಮಾಡಬಾರದು ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read