ಎರಡು ರಾಶಿಯವರ ಅದೃಷ್ಟ ಬದಲಿಸಲಿರುವ ಶನಿ…… ಮೂರು ರಾಶಿಗೆ ಶುರುವಾಗಲಿದೆ ಸಂಕಷ್ಟ

ಗ್ರಹಗಳ ಬದಲಾವಣೆ ಮನುಷ್ಯನ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಗ್ರಹ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚರಿಸಿದಾಗ ರಾಶಿಯವರಿಗೆ ಶುಭ ಹಾಗೂ ಅಶುಭ ಫಲಗಳು ಪ್ರಾಪ್ತಿಯಾಗುತ್ತವೆ. ಮಾರ್ಚ್ 18 ರಂದು ಶನಿದೇವ  ಕುಂಭ ರಾಶಿಯಲ್ಲಿ ಉದಯಿಸಲಿದ್ದಾನೆ.  ಶನಿಯ ಉದಯ 12 ರಾಶಿಗಳ ಮೇಲೆ ಪ್ರಭಾವ ಬೀರಲಿಲದೆ. ಕೆಲ ರಾಶಿಯವರ ಅದೃಷ್ಟ ಖುಲಾಯಿಸಲಿದ್ದು ಮತ್ತೆ ಕೆಲ ರಾಶಿಯವರು ತೊಂದರೆಗೆ ಒಳಗಾಗಲಿದ್ದಾರೆ.

ಈ ರಾಶಿಗೆ ತೊಂದರೆ :

ಮೇಷ ರಾಶಿ : ಶನಿಯ ಉದಯ ಮೇಷ ರಾಶಿಯವರಿಗೆ ಸಮಸ್ಯೆ ತರಲಿದೆ. ಇವರು ಮಾನಸಿಕ ಒತ್ತಡವನ್ನು ಎದುರಿಸಬೇಕಾಗುತ್ತದೆ. ವಾಹನ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಆರೋಗ್ಯದಲ್ಲೂ ಏರುಪೇರಾಗುವ ಸಂಭವವಿದೆ.

ಸಿಂಹ ರಾಶಿ : ಕುಂಭ ರಾಶಿಯಲ್ಲಿ ಶನಿಯ ಉದಯದಿಂದ ತೊಂದರೆ ಎದುರಿಸುತ್ತಾರೆ. ಈ ರಾಶಿಯವರು ವ್ಯಾಪಾರದಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ನಿರ್ಧಾರ ಕೈಗೊಳ್ಳುವ ವೇಳೆ ಆಲೋಚನೆ ಮಾಡಬೇಕು.

ಧನು ರಾಶಿ :  ಧನು ರಾಶಿಯ ಜನರಿಗೂ ಈ ಸಮಯದಲ್ಲಿ ಮಾನಸಿಕ ಒತ್ತಡ ಕಾಡಲಿದೆ. ದೈಹಿಕ ಸಮಸ್ಯೆ ಎದುರಾಗಲಿದೆ. ಅನಾವಶ್ಯಕ ಪ್ರಯಾದಿಂದ ಅಪಘಾತದ ಸಾಧ್ಯತೆ ಇದೆ.

ಶನಿ ಉದಯದಿಂದ ಈ ರಾಶಿಗೆ ಲಾಭ :

ಮಿಥುನ ರಾಶಿ :  ಈ ರಾಶಿಯವರ ಅದೃಷ್ಟ ಬದಲಾಗಲಿದೆ. ಆಹ್ಲಾದಕರ ಸಮಯವನ್ನು ಇವರು ಕಳೆಯಲಿದ್ದಾರೆ. ಸಂತೋಷ ಮತ್ತು ಸಮೃದ್ಧಿ ಮನೆ ಮಾಡಲಿದೆ. ಆರ್ಥಿಕ ಲಾಭವಾಗಲಿದೆ. ಎಲ್ಲ ಕೆಲಸ ಕೈಗೂಡಲಿದೆ.

ತುಲಾ ರಾಶಿ : ಶನಿ ಉದಯದಿಂದ ಲಾಭ ಪಡೆಯುವ ಇನ್ನೊಂದು ರಾಶಿ ತುಲಾ. ಈ ಸಮಯ ಅವರಿಗೆ ತುಂಬಾ ಶುಭಕರವಾಗಿರಲಿದೆ. ಯಾವುದೇ ಕೆಲಸ ಮಾಡಿದರೂ ಯಶಸ್ಸು ಸಿಗುತ್ತದೆ. ಕೆಲಸದ ವ್ಯಾಪ್ತಿ ವಿಸ್ತರಣೆಯಾಗಲಿದೆ. ರಾಜಕೀಯ ಕ್ಷೇತ್ರದಲ್ಲಿ ವೃತ್ತಿ ಜೀವನ ಮಾಡಲು ಯೋಚಿಸುತ್ತಿರುವವರಿಗೆ ಇದು ಉತ್ತಮ ಸಮಯ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read