ಈ ಬಾರಿ ಜಯಗಳಿಸಿದ ಹಿರಿಯ ಮತ್ತು ಕಿರಿಯ ಶಾಸಕರು ಇವರೇ

ಬೆಂಗಳೂರು: ವಿಧಾನಸಭೆ ಚುನಾವಣೆ ಫಲಿತಾಂಶ ಹಲವು ವಿಶೇಷಗಳಿಗೆ ಕಾರಣವಾಗಿದೆ. ದಾವಣಗೆರೆ ಉತ್ತರ ಕ್ಷೇತ್ರದಿಂದ ಪುನರಾಯ್ಕೆಯಾಗಿರುವ ಶಾಮನೂರು ಶಿವಶಂಕರಪ್ಪ ಅತಿ ಹಿರಿಯ ಶಾಸಕರಾಗಿದ್ದಾರೆ.

ವಿಧಾನಸಭೆ ಪ್ರವೇಶಿಸಲಿರುವ ಅತ್ಯಂತ ಹಿರಿಯ ಸದಸ್ಯರಾದ ಶಾಮನೂರು ಶಿವಶಂಕರಪ್ಪ 91 ವರ್ಷವಾಗಿದ್ದು, 2004 ರಿಂದ ನಿರಂತರವಾಗಿ ಆಯ್ಕೆಯಾಗುತ್ತಿದ್ದಾರೆ.

ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ದರ್ಶನ್ ಧ್ರುವನಾರಾಯಣ ಅತ್ಯಂತ ಕಿರಿಯ ಸದಸ್ಯರಾಗಿದ್ದಾರೆ. ಅವರಿಗೆ 28 ವರ್ಷ. ಧ್ರುವನಾರಾಯಣ ಅಕಾಲಿಕ ನಿಧನದಿಂದ ದರ್ಶನ್ ಗೆ ಟಿಕೆಟ್ ನೀಡಲಾಗಿತ್ತು. ತಂದೆ ನಿಧನರಾದ ಒಂದೇ ತಿಂಗಳಿಗೆ ಅವರ ತಾಯಿ ಕೂಡ ನಿಧನರಾಗಿದ್ದರು. ಈಗ ದರ್ಶನ್ ಶಾಸಕರಾಗಿ ಆಯ್ಕೆಯಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read