ಬೆಂಗಳೂರು: ಬೆಂಗಳೂರಿನಲ್ಲಿ ವರುಣಾರ್ಭಟಕ್ಕೆ ಜನರು ಹೈರಾಣಾಗಿದ್ದಾರೆ. ಹಲವೆಡೆ ಸಾಲು ಸಾಲು ಅವಾಂತಗಳು ಸೃಷ್ಟಿಯಾಗಿವೆ. ರಾತ್ರಿ ಸುರಿದ ಧಾರಾಕಾರ ಮಳೆಗೆ ಶಾಮಣ್ಣ ಗಾರ್ಡನ್ ಗೋಡೌನ್ ಗೋಡೆ ಕುಸಿದು ಬಿದ್ದಿದೆ.
ಇಂಡ್ರಸ್ಟ್ರೀಯಲ್ ಏರಿಯಾದ ಬಳಿ ಇದ್ದ ಶಾಮಣ್ಣ ಗಾರ್ಡನ್ ಗೋಡೌನ್ ಗೋಡೆ ಕುಸಿದು ಬಿದ್ದಿದೆ. ಪರಿಣಾಮ ಗೋಡೌನ್ ನಲ್ಲಿದ್ದ ವಸ್ತುಗಳು ನೀರುಪಾಲಾಗಿವೆ.
ಶಾಮಣ್ಣ ಗಾರ್ಡನ್ ಗೋಡೌನ್ ಪಕ್ಕದಲ್ಲಿಯೇ ರಾಜಕಾಲುವೆ ಹರಿಯುತ್ತಿದ್ದು, ಮಳೆ ಆರಂಭಕ್ಕೂ ಮುನ್ನವೇ ರಾಜಕಾಲುವೆಯ ಹೂಳೆತ್ತುವ ಕೆಲಸ ಮಾಡದ ಹಿನ್ನೆಲೆಯಲ್ಲಿ ರಾಜಕಾಲುವೆಯ ನೀರು ಈ ಪ್ರದೇಶಗಳಿಗೆ ನುಗ್ಗಿ ಅವಾಂತರ ಸಂಭವಿಸಿದೆ. ಗೋಡೌನ್ ಗೋಡೆ ಕುಸಿದು ಬಿದ್ದಿದ್ದು, ಅಪಾರ ಪ್ರಮಾಣದ ವಸ್ತುಗಳು ನೀರು ಪಾಲಾಗಿವೆ.