ಬಾಲಿವುಡ್ ಬಾದ್ಶಾ ತಾವೇಕೆ ಬಾಲಿವುಡ್ನ ಕಿಂಗ್ ಅನ್ನೋದನ್ನ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ..! ಶಾರೂಕ್ ಖಾನ್ ನಟನೆಯ ಜವಾನ್ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಸದ್ದು ಮಾಡ್ತಿದೆ. ಇದು ಶಾರೂಕ್ ಖಾನ್ರ ಈ ಹಿಂದಿನ ಸಿನಿಮಾಗಳು ಮಾಡಿರುವ ದಾಖಲೆಯನ್ನೇ ಮುರಿಯುವ ಮೂಲಕ ರೆಕಾರ್ಡ್ ಬ್ರೇಕ್ ಮೂವಿ ಎನಿಸಿಕೊಳ್ತಿದೆ. ಸಿನಿಮಾ ತೆರೆಕಂಡು ಕೇವಲ ಮೂರು ದಿನಗಳಲ್ಲಿ ಜವಾನ್ ಸಿನಿಮಾ 200 ಕೋಟಿ ಕ್ಲಬ್ ಸೇರಿದ ಮೊದಲ ಹಿಂದಿ ಸಿನಿಮಾ ಎನಿಸಿಕೊಂಡಿದೆ.
ಜವಾನ್ ಸಿನಿಮಾ ಸೆಪ್ಟೆಂಬರ್ 7ರಂದು ಶ್ರೀಕೃಷ್ಣ ಜನ್ಮಾಷ್ಟಮಿಯಂದು ರಿಲೀಸ್ ಆಗಿದೆ. ಈ ಸಿನಿಮಾ ರಿಲೀಸ್ ಆದ ಮೊದಲ ದಿನವೇ ವ್ಯಾಪಕ ರೆಸ್ಪಾನ್ಸ್ ಪಡೆದುಕೊಳ್ತಿದೆ. ಸಿನಿಮಾ ವಿಮರ್ಶಕರು ಸಹ ಜವಾನ್ ಸಿನಿಮಾದ ಬಗ್ಗೆ ಉತ್ತಮ ಸ್ಪಂದನೆ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಬಾಲಿವುಡ್ನ ಅತ್ಯುತ್ತಮ ಸಿನಿಮಾಗಳ ಸಾಲಿಗೆ ಜವಾನ್ ಸಿನಿಮಾ ಸೇರ್ಪಡೆಗೊಂಡಿದೆ.
ಜವಾನ್ ಸಿನಿಮಾದ ಮೂಲಕ ಶಾರೂಕ್ ಖಾನ್ ಮೊಟ್ಟ ಮೊದಲ ಬಾರಿಗೆ ದಕ್ಷಿಣ ಭಾರತದ ಫೇಮಸ್ ಕಲಾವಿದರ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಖ್ಯಾತ ನಟ ವಿಜಯ್ ಸೇತುಪತಿ ಹಾಗೂ ನಯನತಾರಾ ಈ ಸಿನಿಮಾದಲ್ಲಿ ಸ್ಟ್ರಾಂಗ್ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ದಕ್ಷಿಣ ಭಾರತದ ಅಟ್ಲೀ ಕೂಡ ಚಿತ್ರತಂಡದಲ್ಲಿದ್ದಾರೆ.
ಜವಾನ್ ಬಾಕ್ಸಾಫೀಸಿನಲ್ಲಿ ಅಬ್ಬರದ ಆರಂಭ ಕಂಡಿತ್ತು. ಮೊದಲ ದಿನವೇ ಜವಾನ್ 75 ಕೋಟಿ ಕ್ಲಬ್ ಸೇರಿದೆ. ಎರಡನೇ ದಿನದಲ್ಲಿ 53 ಕೋಟಿ ರೂಪಾಯಿ ಸಂಪಾದಿಸುವ ಮೂಲಕ ಎರಡೇ ದಿನಗಳಲ್ಲಿ ಜವಾನ್ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಮೂರನೇ ದಿನ ಅಂದ್ರೆ ಶನಿವಾರದಂದು 74.50 ಕೋಟಿ ರೂಪಾಯಿ ಸಂಪಾದಿಸುವ ಮೂಲಕ ಜವಾನ್ ಸಿನಿಮಾವು 202.73 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
https://twitter.com/iamsrk/status/1700192842302267615
https://www.instagram.com/reel/Cwhaknpo-_L/?utm_source=ig_web_copy_link&igshid=MzRlODBiNWFlZA==