1000ಕ್ಕೂ ಅಧಿಕ ನೃತ್ಯಗಾರ್ತಿಯರೊಂದಿಗೆ ಹೆಜ್ಜೆ ಹಾಕಿದ ಶಾರೂಕ್​ ಖಾನ್ ​!

ಬಹುನಿರೀಕ್ಷಿತ ʼಜವಾನ್ʼ​ ಸಿನಿಮಾದ ಮೊದಲ ಗೀತೆ ʼಜಿಂದಾ ಬಂದಾʼ ರಿಲೀಸ್​ಗೂ ಮುನ್ನವೇ ಸಿನಿಮಾ ತಯಾರಕರು ಈ ಸಿನಿಮಾದ ಗೀತೆ ಎಷ್ಟು ಗ್ರ್ಯಾಂಡ್​ ಆಗಿ ಇರಲಿದೆ ಎಂದು ಮಾಹಿತಿ ನೀಡಿದ್ದಾರೆ.

ಶಾರೂಕ್​ ಖಾನ್​ ಈ ಸಾಂಗ್​​ನಲ್ಲಿ ಸಾವಿರಾರು ಮಹಿಳಾ ನರ್ತಕರೊಂದಿಗೆ ಹೆಜ್ಜೆ ಹಾಕಲಿದ್ದಾರೆ ಎಂದು ನೃತ್ಯ ಸಂಯೋಜಕ ಅನಿರುದ್ಧ ಮಾಹಿತಿ ನೀಡಿದ್ದಾರೆ. ಜಿಂದಾ ಬಂದಾ ಬಿಡುಗಡೆಗೂ ಮುನ್ನವೇ ಎಷ್ಟು ಗ್ರ್ಯಾಂಡ್​ ಇರಲಿದೆ ಎಂಬ ಊಹಾಪೋಹಗಳು ಇಂಟರ್ನೆಟ್​ನಲ್ಲಿ ತುಂಬಿ ಥುಳುಕುತ್ತಿದೆ.

ಸಿನಿಮಾದ ಆಪ್ತ ಮೂಲಗಳ ಪ್ರಕಾರ, ಚೆನ್ನೈ, ಹೈದರಾಬಾದ್​, ಬೆಂಗಳೂರು, ಮುಂಬೈ, ಮಧುರೈ ಹಾಗೂ ಹೆಚ್ಚಿನ ನಗರಗಳಲ್ಲಿ 1000ಕ್ಕೂ ಹೆಚ್ಚು ನೃತ್ಯಗಾರರನ್ನು ಬಳಸಿ ಈ ಸಿನಿಮಾದ ಗೀತೆಗೆ ಶೂಟಿಂಗ್ ನಡೆಸಲಾಗಿದೆ. ಐದು ದಿನಗಳ ಹಿಂದೆ ಚೆನ್ನೈನಲ್ಲಿ ಬೃಹತ್​ ಪ್ರಮಾಣದಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಸಿನಿಮಾ ತಂಡ ಮಾಹಿತಿ ನೀಡಿದೆ. 15 ಕೋಟಿಗೂ ಅಧಿಕ ಖರ್ಚು ಮಾಡಿ ಈ ಸಾಂಗ್​ ಚಿತ್ರೀಕರಣ ನಡೆಸಲಾಗ್ತಿದ್ದು, ಜಿಂದಾ ಬಂದಾ ಗೀತೆಯಲ್ಲಿ ಶಾರೂಕ್​ ಸಾವಿರಾರು ಯುವತಿಯರೊಂದಿಗೆ ಹೆಜ್ಜೆ ಹಾಕಿದ್ದಾರೆ.

ಕಿಂಗ್​ ಖಾನ್​ ತಮ್ಮ ಎನರ್ಜಿ ಮೂಲಕವೇ ಪ್ರೇಕ್ಷಕರನ್ನು ರಂಜಿಸುತ್ತಾರೆ. ಅಟ್ಲಿ ನಿರ್ದೇಶನದ ಈ ಸಿನಿಮಾದಲ್ಲಿ ನಯನತಾರಾ ಹಾಗೂ ವಿಜಯ್​ ಸೇತುಪತಿ ಪ್ರಮುಖ ಪಾತ್ರದಲ್ಲಿ ಕಾಣಿಸಿದ್ದಾರೆ. ದೀಪಿಕಾ ಪಡುಕೋಣೆ ಈ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಕಲಾವಿದರಾದ ಸಾನ್ಯಾ ಮಲ್ಹೋತ್ರಾ, ಪ್ರಿಯಾ ಮಣಿ, ಗಿರಿಜಾ ಓಕ್​, ಸಂಜಿತಾ ಭಟ್ಟಾಚಾರ್ಯ, ಲೆಹರ್​ ಖಾನ್​, ಆಲಿಯಾ ಖುರೇಷಿ, ರಿಧಿ, ಡೋಗ್ರಾ, ಸುನೀಲ್​ ಗ್ರೋವರ್​​ ಹಾಗೂ ಮುಖೇಶ್​ ಛಾಬ್ರಾ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read