ಶಾರುಖ್ ಖಾನ್ ಮತ್ತೊಮ್ಮೆ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಶಾರುಖ್ ಖಾನ್ ಅಭಿಮಾನಿಯಾದ 60 ವರ್ಷದ ಕ್ಯಾನ್ಸರ್ ರೋಗಿಯೊಬ್ಬರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ಶಾರುಖ್ ಖಾನ್ ರನ್ನು ಭೇಟಿಯಾಗಬೇಕೆಂದು ಬಯಸಿದ್ದರು. ಅವರ ಆಸೆಯನ್ನ ಬಾಲಿವುಡ್ ಬಾದ್ ಶಾ ಪೂರೈಸಿದ್ದಾರೆ.
ಪಶ್ಚಿಮ ಬಂಗಾಳದ 60 ವರ್ಷದ SRK ಅಭಿಮಾನಿ ಶಿವಾನಿ ಚಕ್ರವರ್ತಿ ಮಾರಣಾಂತಿಕ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಕೆಲವು ದಿನಗಳ ಹಿಂದೆ, ಶಿವಾನಿ ಅವರ ಪುತ್ರಿ ಪ್ರಿಯಾ ಚಕ್ರವರ್ತಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಸ್ವತಃ ಮತ್ತು ಅವರ ತಾಯಿಯನ್ನು ಒಳಗೊಂಡಿರುವ ವೀಡಿಯೊವನ್ನು ಹಂಚಿಕೊಂಡಿದ್ದರು. ಅದರಲ್ಲಿ ಶಾರುಖ್ ಅವರನ್ನು ಭೇಟಿಯಾಗುವುದು ತನ್ನ ತಾಯಿಯ ಕೊನೆಯ ಆಸೆಯೆಂದು ತಿಳಿಸಿದ್ದರು.
ಇದಕ್ಕಾಗಿ ಸಹಾಯ ಮಾಡಲು ನೆಟ್ಟಿಗರನ್ನು ವಿನಂತಿಸಿದ್ದರು. ಈ ವಿಡಿಯೋ ಶೀಘ್ರದಲ್ಲೇ ವೈರಲ್ ಆಗಿ ಶಾರುಖ್ ಖಾನ್ ರವರನ್ನ ತಲುಪಿತ್ತು. ಬಳಿಕ ಮಹಿಳೆಯ ಆಸೆ ಈಡೇರಿತ್ತು. ಮೇ 22ರ ಸೋಮವಾರ ರಾತ್ರಿ 30 ನಿಮಿಷಗಳ ಕಾಲ ವೀಡಿಯೊ ಕರೆ ಮೂಲಕ ಶಾರೂಖ್ ಅವರು ಹಿರಿಯ ಮಹಿಳೆಯ ಕೊನೆಯ ಆಸೆಯನ್ನು ಪೂರೈಸಿದರು. ಅವರನ್ನು ಭೇಟಿ ಮಾಡಿ ಆರ್ಥಿಕ ಸಹಾಯ ನೀಡುವುದಾಗಿ ಮತ್ತು ಕ್ಯಾನ್ಸರ್ ಪೀಡಿತ ರೋಗಿಯ ಮಗಳು ಪ್ರಿಯಾಳ ಮದುವೆಗೆ ಬರುವುದಾಗಿ ಭರವಸೆ ನೀಡಿದರು. ಶಾರುಖ್ ಖಾನ್ ರವರ ಈ ನಡೆ ಭಾರೀ ಮೆಚ್ಚುಗೆ ಗಳಿಸಿದೆ.
Love You Shah Rukh Khan @iamsrk
🥺❤️
You are so precious and the way you make everyone special by being so humble and helpful . it makes you truly The King always ❤️.
HAMARA PATHAAN.
HAMARA SACHA RAJA 👑 pic.twitter.com/yQA19GmFgV— MASRUR (@masrur2srk) May 23, 2023