BIG NEWS: ಸೈಟ್ ತೋರಿಸುವುದಾಗಿ ಹೇಳಿ ಬಿಲ್ಡರ್ ನಿಂದ ಮಹಿಳೆಗೆ ಲೈಂಗಿಕ ಕಿರುಕುಳ: FIR ದಾಖಲು

ಮಂಗಳೂರು: ಸೈಟ್ ತೋರಿಸುವುದಾಗಿ ಹೇಳಿ ಮಹಿಳೆ ಕರೆದೊಯ್ದ ಬಿಲ್ಡರ್ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.

ಮಹಿಳೆ ನೀಡಿದ ದೂರು ಆಧರಿಸಿ ಮಂಗಳೂರಿನ ಬಿಲ್ಡರ್ ರಶೀದ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಕೊಡಗು ಜಿಲ್ಲೆಯ ಕುಶಾಲನಗರದಲ್ಲಿರುವ ಸೈಟ್ ಖರೀದಿಸಬಹುದು, ತೋರಿಸುವುದಾಗಿ ಹೇಳಿ ಬಿಲ್ಡರ್ ರಶೀದ್ ಮಹಿಳೆಯನ್ನು ಕರೆದೊಯ್ದಿದ್ದರು.

ಅ.21ರಂದು ಕಾರಿನಲ್ಲಿ ರಶೀದ್ ಜೊತೆ ಮಹಿಳೆ ತೆರಳಿದ್ದರು. ಈ ವೇಳೆ ಮಹಿಳೆ ಹೋಟೆಲ್ ನಲ್ಲಿ ಇಬ್ಬರಿಗೂ ಪ್ರತ್ಯೇಕ ರೂಂ ಬುಕ್ ಮಾಡಿದ್ದರು. ಆದರೆ ಬಿಲ್ಡರ್ ರಶೀದ್ ಇಬ್ಬರೂ ಒಂದೇ ರೂಂ ನಲ್ಲಿರುವ ಇಂಗಿತ ವ್ಯಕ್ತಪಡಿಸಿದ್ದ. ಇದರಿಂದ ಹೆದರಿದ ಮಹಿಳೆ ವಿರಾಜಪೇಟೆಯಲ್ಲಿರುವ ತನ್ನ ತಂಗಿಯ ಮನೆಯಲ್ಲಿ ಉಳಿದುಕೊಂಡಿದ್ದರಂತೆ. ಮರುದಿನ ಸೈಟ್ ನೋಡಲು ಕರೆದಾಗ ರಶೀದ್ ಜೊತೆ ಮಹಿಳೆ ಹೋಗಿದ್ದಾಗ ಅಸಭ್ಯವಾಗಿ ವರ್ತಿಸಿದ್ದಾನಂತೆ. ಅಲ್ಲದೇ ದಾರಿ ಮಧ್ಯೆ ಹಣದ ಆಮಿಷವೊಡ್ಡಿ ಅತ್ಯಾಚಾರಕ್ಕೂ ಯತ್ನಿಸಿದ್ದಾಗಿ ಮಹಿಳೆ ದೂರು ನೀಡಿದ್ದಾರೆ.

ಈ ವಿಚಾರ ಮ್ಯಾನೇಜರ್ ಗೆ ತಿಳಿಸಿದಾಗ ಮಹಿಳೆ ಮೇಲೆ ಹಲ್ಲೆ ನಡೆಸಿ ಬಿಲ್ಡರ್ ಬೆದರಿಕೆಯೊಡ್ಡಿದ್ದಾಗಿ ಮಹಿಳೆ ದೂರು ನೀಡಿದ್ದು, ಬಿಲ್ಡರ್ ರಶೀದ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read