ಬೆಂಗಳೂರು : ಬೆಂಗಳೂರಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಖಾಸಗಿ ಕಾಲೇಜಿನ ಹೆಚ್ ಒ ಡಿಯನ್ನು ಪೊಲೀಸರು ಬಂಧಿಸಿದ್ದಾರೆ.
ಖಾಸಗಿ ಕಾಲೇಜಿನ ಹೆಚ್ ಒಡಿ ಸಂಜೀವ್ ಕುಮಾರ್ ಬಂಧಿತ ಎಂದು ಗುರುತಿಸಲಾಗಿದೆ. ತಿಲಕ್ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಿಸಿಎ ವಿದ್ಯಾರ್ಥಿನಿ ದೂರು ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ
ಅ. 2 ರಂದು ವಿದ್ಯಾರ್ಥಿಯನ್ನು ಮನೆಗೆ ಕರೆಸಿಕೊಂಡು ಕಾಮುಕ ಸಂಜೀವ ಕುಮಾರ್ ಈ ಕೃತ್ಯ ಎಸಗಿದ್ದಾನೆ. ಮನೆಗೆ ಊಟಕ್ಕೆ ಬಾ..ನಮ್ಮ ಮನೆಯವರೆಲ್ಲ ಸೇರಿ ಒಟ್ಟಿಗೆ ಊಟ ಮಾಡೋಣ ಎಂದು ವಿದ್ಯಾರ್ಥಿನಿಯನ್ನ ಮನೆಗೆ ಕರೆಸಿಕೊಂಡಿದ್ದಾನೆ.
ಮನೆಗೆ ಹೋದಾಗ ಸಂಜೀವ್ ಒಬ್ಬನೇ ಇದ್ದದ್ದನ್ನು ಕಂಡು ವಿದ್ಯಾರ್ಥಿನಿ ಶಾಕ್ ಆಗಿದ್ದಾಳೆ. ನನ್ನ ಜೊತೆ ಸಹಕರಿಸಿದರೆ ಪರೀಕ್ಷೆಯಲ್ಲಿ ಹೆಚ್ಚು ಅಂಕ ಕೊಡುತ್ತೇನೆ ಎಂದು ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ವಿದ್ಯಾರ್ಥಿನಿ ಪೋಷಕರಿಗೆ ಸುದ್ದಿ ಮುಟ್ಟಿಸಿದ್ದು, ಪೋಷಕರು ತಿಲಕ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.