ಸಚಿನ್ ತೆಂಡೂಲ್ಕರ್ ಪುತ್ರಿ ಮತ್ತು ಶಾರುಖ್ ಖಾನ್ ಮಗಳ ನಡುವಿನ ಸೌದರ್ಯ ವರ್ಣನೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹುಟ್ಟುಹಾಕಿದೆ.
ಭಾನುವಾರ ವಾಂಖೆಡೆ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಮುಂಬೈ ಇಂಡಿಯನ್ಸ್ (ಎಂಐ) ಐಪಿಎಲ್ ಪಂದ್ಯ ವೀಕ್ಷಣೆಯಲ್ಲಿ ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್ ಮತ್ತು ಶಾರುಖ್ ಖಾನ್ ಮಗಳು ಸುಹಾನಾ ಖಾನ್ ಇಬ್ಬರೂ ಭಾಗವಹಿಸಿದ್ದರು.
ಮುಂಬೈ ಇಂಡಿಯನ್ಸ್ ನೊಂದಿಗೆ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಸಹೋದರ ಅರ್ಜುನ್ ತೆಂಡೂಲ್ಕರ್ ಅವರನ್ನು ಬೆಂಬಲಿಸಲು ಸಾರಾ ಅಲ್ಲಿದ್ದರೆ, ಕೆಕೆಆರ್‌ಗೆ ಬೆಂಬಲ ನೀಡಲು ಸುಹಾನಾ ಇದ್ದರು. ಇಬ್ಬರೂ ತಮ್ಮ ತಂಡದ ಜೆರ್ಸಿಯಲ್ಲಿ ಕಾಣಿಸಿಕೊಂಡು ಆಟಗಾರರನ್ನು ಹುರಿದುಂಬಿಸಿದರು. ಅವರಿಬ್ಬರ ನಡುವಿನ ಹೋಲಿಕೆ ಇದೀಗ ಭಾರೀ ಟೀಕೆ, ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ.
ಮಹಿಳೆಯರು ತಮ್ಮ ಜೀವನ ಮತ್ತು ವ್ಯವಹಾರವನ್ನು ಗಮನದಲ್ಲಿಟ್ಟುಕೊಂಡು, ಒಬ್ಬರನ್ನೊಬ್ಬರು ವಿರೋಧಿಸದೆ ಮತ್ತು ತಮ್ಮ ಸೌಂದರ್ಯವನ್ನು ಕಡಿಮೆ ಮಾಡಿಕೊಳ್ಳದೇ ತಮ್ಮ ದಾರಿಯಲ್ಲಿ ಹೋಗಲಾರರು ಎಂದು ಟ್ವಿಟರ್ ಬಳಕೆದಾರರೊಬ್ಬರು ಹೇಳಿದ್ದು ಅದರಲ್ಲಿ ಸೌಂದರ್ಯವೆಂಬುದನ್ನ ಸುಹಾನಾ ವಿಷಯದಲ್ಲಿ ಕೆಲವರು ಅಲ್ಲಗಳೆದಿದ್ದಾರೆ.
ಸಾರಾ ಮತ್ತು ಸುಹಾನಾ ನೋಟವನ್ನು ಹೋಲಿಸಲು ನಿರ್ಧರಿಸಿದ ಕೆಲವರು ಬಣ್ಣದ ಆಧಾರದ ಮೇಲೆ ಸಾರಾಳನ್ನು ಬ್ಯೂಟಿಯೆಂದಿದ್ದು, ಸುಹಾನಾಳನ್ನು ಟೀಕಿಸಿದ್ದಾರೆ. ಇದಕ್ಕೆ ಹಲವು ನೆಟ್ಟಿಗರು ಆಕ್ರೋಶ ಹೊರಹಾಕಿದ್ದು ಭಾರತದಲ್ಲಿ ಇನ್ನೂ ವ್ಯಕ್ತಿಗಳ ಸೌಂದರ್ಯವನ್ನು ಮೈಬಣ್ಣದ ಆಧಾರದ ಮೇಲೆ ನಿರ್ಧರಿಸೋ ಕೆಟ್ಟ ಮನಸ್ಥಿತಿ ಇದೆ ಎಂದು ಮೈಬಣ್ಣ ಮತ್ತು ತೆಳ್ಳಗಿನ ದೇಹವನ್ನ ಸೌಂದರ್ಯದೊಂದಿಗೆ ಸಮೀಕರಿಸುವ ಪ್ರವೃತ್ತಿಯನ್ನು ಟೀಕಿಸಿದ್ದಾರೆ.
https://twitter.com/krownnist/status/1647628685254729728?ref_src=twsrc%5Etfw%7Ctwcamp%5Etweetembed%7Ctwterm%5E1647628685254729728%7Ctwgr%5E2521b5cbcbfb933ae42646454cf1a1a1aa67810f%7Ctwcon%5Es1_&ref_url=https%3A%2F%2Fwww.news18.com%2Fbuzz%2Fsexist-colourist-man-compares-suhana-khan-sara-tendulkars-beauty-at-ipl-match-slammed-7564771.html
https://twitter.com/yourastrogf/status/1647664573036765184?ref_src=twsrc%5Etfw%7Ctwcamp%5Etweetembe
https://twitter.com/imanishita/status/1647700768592646146?ref_src=twsrc%5Etfw%7Ctwcamp%5Etweetembed%7Ctwterm%5E1647700768592646146%7Ctwgr%5E2521b5cbcbfb933ae42646454cf1a1a1aa67810f%7Ctwcon%5Es1_&ref_url=https%3A%2F%2Fwww.news18.com%2Fbuzz%2Fsexist-colourist-man-compares-suhana-khan-sara-tendulkars-beauty-at-ipl-match-slammed-7564771.html