‘ಲೈಂಗಿಕ’ ವ್ಯಸನಕ್ಕೊಳಗಾದವ್ರಲ್ಲಿ ಕಾಣಿಸಿಕೊಳ್ಳುತ್ತೆ ಈ ಲಕ್ಷಣ

ಯಾವುದೇ ವಸ್ತುವಿನ ಮೇಲೆ ಅತಿಯಾದ ಮೋಹ, ವ್ಯಸನವನ್ನು ಮಾನಸಿಕ ಅಸ್ವಸ್ಥತೆ ಎಂದೇ ಪರಿಗಣಿಸಲಾಗುತ್ತದೆ. ಲೈಂಗಿಕ ವ್ಯಸನ ಕೂಡ ಇದ್ರಲ್ಲಿ ಒಂದು. ಪದೇ ಪದೇ ಸೆಕ್ಸ್ ಬಗ್ಗೆ ವಿಚಾರ, ಮಹಿಳೆ ನೋಡಿದ್ರೆ ಪ್ರಚೋದನೆಗೊಳಗಾಗುವುದು ಎಲ್ಲವೂ ಮಾನಸಿಕ ಅಸ್ವಸ್ಥತೆ. ಅಧ್ಯಯನದ ಪ್ರಕಾರ ಯಾವ ವ್ಯಕ್ತಿ ಈ ವಿಚಾರದಲ್ಲಿ ತನ್ನನ್ನು ತಾನು ನಿಯಂತ್ರಿಸಿಕೊಳ್ಳಲು ವಿಫಲನಾಗ್ತಾನೋ ಆತ ತೊಂದರೆ ಅನುಭವಿಸುತ್ತಾನೆ.

ಸೆಕ್ಸ್ ವ್ಯಸನಿಗಳ ಬಗ್ಗೆ ತಜ್ಞರು ವಿವರವಾಗಿ ತಿಳಿಸಿದ್ದಾರೆ. ಪದೇ ಪದೇ ಅಶ್ಲೀಲ ವಿಡಿಯೋ ನೋಡಬೇಕೆನ್ನುವುದು ಸೆಕ್ಸ್ ವ್ಯಸನದ ಒಂದು ಲಕ್ಷಣ.

ಎಲ್ಲಿ, ಯಾರ ಜೊತೆಯಲ್ಲಿಯಾದ್ರೂ ಸರಿ ಸೆಕ್ಸ್ ಗೆ ಉತ್ಸುಕರಾಗುವುದು ವ್ಯಸನದ ಇನ್ನೊಂದು ಲಕ್ಷಣ. ಸಂಗಾತಿಯನ್ನು ಕೂಡ ಸೆಕ್ಸ್ ದೃಷ್ಟಿಯಲ್ಲಿಯೇ ನೋಡಲು ಶುರುಮಾಡ್ತಾರೆ.

ಇಂತ ಜನರು ಒಂಟಿತನಕ್ಕೆ ಬಲಿಯಾಗ್ತಾರೆ. ಜೊತೆಗೆ ತಮ್ಮೆಲ್ಲ ಸಮಯವನ್ನು ಸೆಕ್ಸ್ ಬಗ್ಗೆ ವಿಚಾರ ಮಾಡುವುದ್ರಲ್ಲಿಯೇ ಕಳೆಯುತ್ತಾರೆ.

ಹಸ್ತಮೈಥುನ ಒಂದು ನೈಸರ್ಗಿಕ ಕ್ರಿಯೆ. ಆದ್ರೆ ಇದನ್ನು ವ್ಯಕ್ತಿಯೊಬ್ಬ ಪದೇ ಪದೇ ಮಾಡ್ತಿದ್ದರೆ ಆತ ಸೆಕ್ಸ್ ವ್ಯಸನಕ್ಕೆ ಬಿದ್ದಿದ್ದಾನೆ ಎಂದರ್ಥ.

ಲೈಂಗಿಕ ವ್ಯಸನಕ್ಕೊಳಗಾದ ವ್ಯಕ್ತಿಗಳು ಸದಾ ಖಿನ್ನತೆ, ಆತಂಕ, ಒತ್ತಡದಿಂದ ಬಳಲುತ್ತಿರುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read