ಮುಟ್ಟಿನ ಸಮಯದಲ್ಲಿ ಹೊಟ್ಟೆಯಲ್ಲಿ ತೀವ್ರವಾದ ಸೆಳೆತ-ನೋವು ಸಾಮಾನ್ಯವಲ್ಲ; ಅದಕ್ಕಿರಬಹುದು ಇಂಥಾ ಗಂಭೀರ ಕಾರಣ…….!

ಮುಟ್ಟಿನ ನೋವು ಬಹುತೇಕ ಎಲ್ಲಾ ಮಹಿಳೆಯರನ್ನೂ ಕಾಡುತ್ತದೆ. ಆದರೆ ಪ್ರತಿಯೊಬ್ಬರಲ್ಲೂ ಇದು ವಿಭಿನ್ನವಾಗಿರುತ್ತದೆ. ಕೆಲವರಿಗೆ ಹೊಟ್ಟೆ ಮುರಿದಂತಾಗುವುದು, ಸೊಂಟದಲ್ಲಿ ಸೆಳೆತ, ಕೈಕಾಲುಗಳಲ್ಲಿ ಸೆಳೆತ ವಿಪರೀತವಾಗಿರುತ್ತದೆ. ನಡೆದಾಡುವುದು ಕೂಡ ಕಷ್ಟವಾಗುತ್ತಿದ್ದರೆ ಅಂತಹ ಪರಿಸ್ಥಿತಿಯಲ್ಲಿ ಮಹಿಳೆಯರು ಎಚ್ಚೆತ್ತುಕೊಳ್ಳಬೇಕು. ಮುಟ್ಟಿನ ಸಮಯದಲ್ಲಿ ಉಂಟಾಗುವ ಇಂತಹ ನೋವು ಸಾಮಾನ್ಯವಲ್ಲ. ಈ ನೋವು ದೇಹದಲ್ಲಿ ಬೆಳೆಯುತ್ತಿರುವ ಕೆಲವು ರೋಗಗಳ ಸಂಕೇತವಾಗಿರಬಹುದು. ಇದಕ್ಕೆ ಸಂಭವನೀಯ ಕಾರಣಗಳನ್ನು ತಿಳಿಯೋಣ.

ಎಂಡೊಮೆಟ್ರಿಯೊಸಿಸ್

ಇದರಲ್ಲಿ ಗರ್ಭಾಶಯದ ಒಳ ಪದರದ (ಎಂಡೊಮೆಟ್ರಿಯಮ್) ಅಂಗಾಂಶದ ಒಳಪದರವು ದೇಹದ ಹೊರಗೆ ಬೆಳೆಯಲು ಪ್ರಾರಂಭಿಸುತ್ತದೆ. ಉದಾಹರಣೆಗೆ ಫಾಲೋಪಿಯನ್ ಟ್ಯೂಬ್ಗಳು ಅಥವಾ ಅಂಡಾಶಯಗಳು. ಇದು ಪಿರಿಯಡ್ಸ್ ಸಮಯದಲ್ಲಿ ತೀವ್ರವಾದ ನೋವನ್ನು ಉಂಟುಮಾಡಬಹುದು.

ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್

ಪಿಸಿಓಎಸ್ ಒಂದು ಹಾರ್ಮೋನ್ ಅಸಮತೋಲನ. ಇದು ಅನಿಯಮಿತ ಮುಟ್ಟಿಗೆ ಕಾರಣವಾಗಬಹುದು. ಅಷ್ಟೇ ಅಲ್ಲ ಇದರಿಂದ ಫೈಬ್ರಾಯ್ಡ್ಸ್‌ ಬೆಳೆಯುವ ಸಾಧ್ಯತೆಯೂ ಇರುತ್ತದೆ. ಇದು ಕೂಡ ಮುಟ್ಟಿನ ನೋವಿಗೆ ಕಾರಣವಾಗುತ್ತದೆ.

ಗರ್ಭಾಶಯದ ಫೈಬ್ರಾಯ್ಡ್ಸ್‌

ಇವುಗಳು ಗರ್ಭಾಶಯದ ಗೋಡೆಯ ಮೇಲೆ ಬೆಳೆಯುವ ಉಂಡೆಗಳು. ಸ್ನಾಯು ಮತ್ತು ಸಂಯೋಜಕ ಅಂಗಾಂಶದಿಂದ ಮಾಡಲ್ಪಟ್ಟಿವೆ. ಈ ಗಡ್ಡೆಗಳು ಪಿರಿಯಡ್ಸ್ ಸಮಯದಲ್ಲಿ ತೀವ್ರವಾದ ನೋವನ್ನು ಉಂಟುಮಾಡಬಹುದು

ಅಡೆನೊಮೈಯೋಸಿಸ್

ಇದು ಗರ್ಭಾಶಯದ ಒಳ ಪದರದಿಂದ (ಎಂಡೊಮೆಟ್ರಿಯಮ್) ಅಂಗಾಂಶವು ಗರ್ಭಾಶಯದ ಸ್ನಾಯುವಿನ ಗೋಡೆಯೊಳಗೆ ಬೆಳೆಯಲು ಪ್ರಾರಂಭಿಸುವ ಸ್ಥಿತಿಯಾಗಿದೆ. ಇದು ಮುಟ್ಟಿನ ಸಮಯದಲ್ಲಿ ಭಾರೀ ರಕ್ತಸ್ರಾವ ಮತ್ತು ನೋವಿಗೆ ಕಾರಣವಾಗುತ್ತದೆ.

ಗರ್ಭಕಂಠದ ಸ್ಟೆನೋಸಿಸ್

ಗರ್ಭಕಂಠದ ಕಿರಿದಾಗುವಿಕೆಯನ್ನು ಗರ್ಭಕಂಠದ ಸ್ಟೆನೋಸಿಸ್ ಎಂದು ಕರೆಯಲಾಗುತ್ತದೆ. ಈ ಸ್ಥಿತಿಯು ಮುಟ್ಟಿನ ಸಮಯದಲ್ಲಿ ರಕ್ತದ ಹರಿವನ್ನು ತಡೆಯುತ್ತದೆ, ಇದು ನೋವನ್ನು ಉಂಟುಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read