ವಾರವಿಡೀ ನಳನಳಿಸಲು ವೀಕೆಂಡ್‌ ನಲ್ಲಿ ನಿಮಗೋಸ್ಕರ ಮೀಸಲಿಡಿ ಈ ಸಮಯ

ಚೆಂದವಾಗಿ ಕಾಣಿಸುವುದು ಯಾರಿಗೆ ಇಷ್ಟವಿಲ್ಲ ಹೇಳಿ…? ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ನಾನು ಹೀಗೆ ಕಾಣಿಸಬೇಕು, ಹಾಗೇ ಕಾಣಿಸಬೇಕು ಎಂಬ ಆಸೆ ಇರುತ್ತದೆ. ಆದರೆ ಎಲ್ಲಾ ಆಸೆಗಳು ಈಡೇರುವುದಿಲ್ಲ. ಈಗಂತೂ ದುಡ್ಡು ಇಲ್ಲದಿದ್ದರೆ ಏನೂ ಕೂಡ ನೆಡೆಯುವುದಿಲ್ಲ. ಮನೆ ಹತ್ತಿರ ಇರುವ ಪಾರ್ಲರ್ ಗೆ ಹೊಗಿ ಐಬ್ರೋ ಶೇಪ್ ಮಾಡಿದರೂ 50 ರೂಪಾಯಿ ಎನ್ನುತ್ತಾರೆ. ಆದಷ್ಟು ಮನೆಯಲ್ಲಿಯೇ ನಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕೆ ನೋಡಿದ್ರೆ ನಮ್ಮ ಜೇಬಿಗೂ ಕತ್ತರಿ ಬೀಳಲ್ಲ. ಮನಸ್ಸಿಗೂ ಖುಷಿ.

ಭಾನುವಾರ ಮನೆಯ ಕೆಲಸವೆಲ್ಲಾ ಆದಷ್ಟು ಬೇಗ ಮುಗಿಸಿ. ಮನೆಯವರ ಸಹಾಯ ತೆಗೆದುಕೊಳ್ಳುವುದನ್ನು ಮರೆಯಬೇಡಿ. ನಂತರ ಒಂದಷ್ಟು ಸಮಯ ನಿಮಗಂಥ ಎತ್ತಿಡಿ. ಆ ಸಮಯದಲ್ಲಿ ಯಾರೂ ಕೂಡ ನಿಮ್ಮನ್ನು ಡಿಸ್ಟರ್ಬ್ ಮಾಡಬಾರದು ಎಂಬುದನ್ನು ಮೊದಲೇ ತಿಳಿಸಿಬಿಡಿ. ಆಗ ಕಿರಿಕಿರಿ ತಪ್ಪುತ್ತದೆ.

ಯಾವುದಾದರೂ ಒಳ್ಳೆಯ ಹೇರ್ ಆಯಿಲ್ ತೆಗೆದುಕೊಂಡು ಡಬ್ಬಲ್ ಬಾಯಿಲ್ ಮಾಡಿಕೊಂಡು ನಿಮ್ಮ ತಲೆಗೆ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ. ಹಾಗೇ ಒಂದು ಬಕೆಟ್ ಬಿಸಿನೀರು ಇಟ್ಟುಕೊಂಡು ಅದಕ್ಕೆ ಸ್ವಲ್ಪ ಶಾಂಪೂ ಅಥವಾ ಉಪ್ಪು ಹಾಕಿಕೊಂಡು ಕಾಲನ್ನು ಅದರಲ್ಲಿ 20 ನಿಮಿಷಗಳ ಕಾಲ ಮುಳುಗಿಸಿ ಇಡಿ.

 ನಂತರ ಒಂದು ಬ್ರಷ್ ತೆಗೆದುಕೊಂಡು ಚೆನ್ನಾಗಿ ತಿಕ್ಕಿ ಕ್ಲೀನ್ ಮಾಡಿಕೊಂಡು ಅಕ್ಕಿ ಹಿಟ್ಟಿಗೆ ಮೊಸರು ಮಿಕ್ಸ್ ಮಾಡಿಕೊಂಡು ಕಾಲನ್ನು ಸ್ಕ್ರಬ್ ಮಾಡಿಕೊಳ್ಳಿ. ಹಾಗೇ ಮುಖಕ್ಕೆ ಯಾವುದಾದರೂ ಒಳ್ಳೆಯ ಫೇಸ್ ಪ್ಯಾಕ್ ಹಚ್ಚಿಕೊಂಡು ಹಿತವಾದ ಸಂಗೀತ ಕೇಳಿ.

ಅಡುಗೆ ಮನೆಯಲ್ಲಿರುವ ವಸ್ತುಗಳನ್ನೇ ಬಳಸಿಕೊಂಡು ನಿಮ್ಮ ಸೌಂದರ್ಯವನ್ನು ಹೇಗಲ್ಲಾ ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳಿ. ಹಾಗೇ ನಿಮ್ಮ ಸಮಯವನ್ನು ಎಂಜಾಯ್ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read