ಗಂಡನಿಂದ ದೂರವಿದ್ದ 35ರ ಮಹಿಳೆ; 14 ವರ್ಷದ ಮಗನ ಗೆಳೆಯನೊಂದಿಗೆ ಪರಾರಿ !

ತನ್ನ ಮಗನ ಸ್ನೇಹಿತನಾದ 14 ವರ್ಷದ ಬಾಲಕನೊಂದಿಗೆ ಪರಾರಿಯಾಗಿದ್ದ 35 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕನನ್ನು ಸಹ ವಶಕ್ಕೆ ತೆಗೆದುಕೊಳ್ಳಲಾಗಿದೆ. 14 ವರ್ಷದ ಬಾಲಕನ ಪೋಷಕರ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೇರಳದ ಪಾಲಕ್ಕಾಡ್‌ ಜಿಲ್ಲೆಯ ಕುನ್ನಿಸೇರಿಯ ಕುತಿರಪಾರ ಮೂಲದ ಮಹಿಳೆ ತನ್ನ 11 ವರ್ಷದ ಮಗನ ಸ್ನೇಹಿತನಾದ 14 ವರ್ಷದ ಬಾಲಕನೊಂದಿಗೆ ಪರಾರಿಯಾಗಿದ್ದಳು.

14 ವರ್ಷದ ಬಾಲಕ ತನ್ನ ಶಾಲಾ ಪರೀಕ್ಷೆಗಳ ನಂತರ ಮನೆಗೆ ಹಿಂತಿರುಗದೆ ಇದ್ದಾಗ ಬಾಲಕ ಮಹಿಳೆಯೊಂದಿಗೆ ಇದ್ದಾನೆ ಎಂದು ಕುಟುಂಬ ಸದಸ್ಯರಿಗೆ ತಿಳಿಯಿತು. ನಂತರ ಅಲತ್ತೂರು ಪೊಲೀಸರಿಗೆ ದೂರು ನೀಡಲಾಗಿದ್ದು, ಬಳಿಕ ಇಬ್ಬರೂ ಎರ್ನಾಕುಲಂನಲ್ಲಿ ಪತ್ತೆಯಾದರು. ಬಾಲಕನನ್ನು ಅಪಹರಿಸಿದ ಆರೋಪದ ಮೇಲೆ ಗೃಹಿಣಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪರೀಕ್ಷೆಯ ನಂತರ 14 ವರ್ಷದ ಬಾಲಕ ಮಹಿಳೆಯ ಮನೆಗೆ ಬಂದು ಬೇರೆಲ್ಲಿಗಾದರೂ ಹೋಗೋಣ ಎಂದು ಹೇಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಆತ ಅಪ್ರಾಪ್ತನಾಗಿದ್ದರಿಂದ ಮಹಿಳೆಯನ್ನು ಆರೋಪಿಯನ್ನಾಗಿ ಮಾಡಲಾಗಿದೆ. ಪಾಲಕ್ಕಾಡ್‌ನಿಂದ ಎರ್ನಾಕುಲಂಗೆ ತಮ್ಮ ಮನೆಗಳನ್ನು ತೊರೆದು ತಲುಪಿದಾಗ ಪೊಲೀಸರು ಇಬ್ಬರನ್ನು ಹಿಡಿದರು. ನಂತರ ಬಾಲಕನನ್ನು ಪಾಲಕ್ಕಾಡ್‌ಗೆ ಕರೆತಂದು ಪೋಷಕರೊಂದಿಗೆ ಕಳುಹಿಸಲಾಗಿದೆ. ತನ್ನ ಪತಿಯಿಂದ ದೂರವಿರುವ ಮಹಿಳೆ ವಿರುದ್ಧ ಅಗತ್ಯವಿದ್ದರೆ ಪೋಕ್ಸೋ ಕಾಯ್ದೆಯಡಿ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read