BIG NEWS: ಇ -ತ್ಯಾಜ್ಯ ಖರೀದಿ, ಸಂರಕ್ಷಣೆಗೆ ಪ್ರತ್ಯೇಕ ನಿಯಮ

ಬೆಂಗಳೂರು: ಇ- ತ್ಯಾಜ್ಯ ಮರು ಖರೀದಿ ಮಾಡಲು ನಿಯಮಗಳನ್ನು ರೂಪಿಸುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಇ- ತ್ಯಾಜ್ಯ ಹೆಚ್ಚಾಗುತ್ತಿದ್ದು, ಅದನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡದ ಕಾರಣ ಪರಿಸರಕ್ಕೆ ಮಾರಕವಾಗುತ್ತಿದೆ. ಹೀಗಾಗಿ ಇ –ತ್ಯಾಜ್ಯ ಖರೀದಿ ಮತ್ತು ಸಂರಕ್ಷಣೆಗೆ ಪ್ರತ್ಯೇಕ ನಿಯಮ ರೂಪಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇ –ತ್ಯಾಜ್ಯ ಪ್ರಮಾಣ ಹೆಚ್ಚುತ್ತಿದ್ದು, ಅವುಗಳನ್ನು ಖರೀದಿಸುವವರು ಸಮರ್ಪಕವಾಗಿ ಸಂಸ್ಕರಿಸುತ್ತಿಲ್ಲ. ಹೀಗಾಗಿ ತ್ಯಾಜ್ಯ ಪ್ರಮಾಣ ಹೆಚ್ಚಾಗಿ ಪರಿಸರಕ್ಕೆ ಹಾನಿಯಾಗುತ್ತಿದೆ. ಇದನ್ನು ತಡೆಯಲು ಹೊಸ ಎಲೆಕ್ಟ್ರಿಕ್ ಉಪಕರಣಗಳನ್ನು ಖರೀದಿಸುವ ಸಂದರ್ಭದಲ್ಲಿ ಗ್ರಾಹಕರು ಇಚ್ಛಿಸಿದಲ್ಲಿ ಅವರಲ್ಲಿನ ಹಳೆಯ ಎಲೆಕ್ಟ್ರಿಕ್ ಉಪಕರಣಗಳನ್ನು ಮಾರಾಟಗಾರರು ಕನಿಷ್ಠ ಬೆಲೆಗೆ ಮರು ಖರೀದಿಸಬೇಕು ಎಂಬ ನಿಯಮ ಜಾರಿ ಆಗಬೇಕು. ಹಳೆಯ ಎಲೆಕ್ಟ್ರಿಕ್ ವಸ್ತುಗಳ ದತ್ತಾಂಶ ದುರ್ಬಳಕೆ ಆಗದಂತೆ ಮರು ಖರೀದಿ ಅನುಷ್ಠಾನ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ ಸಚಿವರು ಸೂಚನೆ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read