ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಇನ್ನು ಖಾಸಗಿ ವಿವಿಗಳಲ್ಲಿ ಪ್ರವೇಶಕ್ಕೆ ಪ್ರತ್ಯೇಕ ಸಿಇಟಿ ಇಲ್ಲ: ಕಾಮೆಡ್ –ಕೆ, JEE, CET ಅಂಕ ಪರಿಗಣನೆ

ಬೆಂಗಳೂರು: ಈ ವರ್ಷ ಖಾಸಗಿ ವಿವಿಗಳಲ್ಲಿ ವೃತ್ತಿಪರ ಕೋರ್ಸ್ ಪ್ರವೇಶ ಬಯಸುವ ವಿದ್ಯಾರ್ಥಿಗಳು ಆ ವಿವಿಗಳು ನಡೆಸುವ ಪ್ರತ್ಯೇಕ ಪರೀಕ್ಷೆ ಬರೆಯುವ ಅಗತ್ಯವಿಲ್ಲ. ಆದರೆ, ಖಾಸಗಿ ವಿವಿಗಳಲ್ಲಿ ಸೀಟು ಬೇಕಿದ್ದಲ್ಲಿ ಸಿಇಟಿ ಹೊರತಾಗಿಗಿ ಕಾಮೆಡ್ –ಕೆ ಪರೀಕ್ಷೆ ಬರೆಯಬೇಕಿದೆ.

ಇಷ್ಟು ವರ್ಷ ಖಾಸಗಿ ವಿವಿಗಳು ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ತಮ್ಮದೇ ಆದ ಪ್ರತ್ಯೇಕ ಸಾಮಾನ್ಯ ಪ್ರವೇಶ ಪರೀಕ್ಷೆಗಳನ್ನು ನಡೆಸುತ್ತಿದ್ದವು. ಇದರಿಂದ ವಿದ್ಯಾರ್ಥಿಗಳು ಹೆಚ್ಚಿನ ಪರೀಕ್ಷೆ ಎದುರಿಸುವಂತಾಗಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ನಿರ್ಧಾರ ಕೈ ಬಿಡಲು ಮನವಿ ಮಾಡಿದ್ದರಿಂದ ಖಾಸಗಿ ವಿವಿಗಳು ಪ್ರತ್ಯೇಕ ಸಿಇಟಿ ನಡೆಸುವುದರಿಂದ ಹಿಂದೆ ಸರಿದಿವೆ. ಪ್ರವೇಶ ಕಲ್ಪಿಸುವಾಗ ಸಿಇಟಿ ಜೊತೆಗೆ ಕಾಮೆಡ್ -ಕೆ ಮತ್ತು ಜೆಇಇ ಅಂಕಗಳನ್ನು ಪರಿಗಣಿಸಲು ನಿರ್ಧರಿಸಲಾಗಿದೆ.

ಏಪ್ರಿಲ್ 16 ಮತ್ತು 17ರಂದು ಸಿಇಟಿ, ಮೇ 10ರಂದು ಕಾಮೆಡ್ –ಕೆ ಪರೀಕ್ಷೆ ನಡೆಯಲಿದೆ. ಕೆಇಎ ನಡೆಸುವ ಸಿಇಟಿ ಮೂಲಕ ಖಾಸಗಿ ವಿವಿಗಳಲ್ಲಿ ಶೇ. 45ರಷ್ಟು ಸರ್ಕಾರಿ ಸೀಟುಗಳನ್ನು ಹಂಚಿಕೆ ಮಾಡಲಾಗುವುದು. ಉಳಿದ ಶೇ. 55 ರಷ್ಟು ಸೀಟುಗಳನ್ನು ಕಾಮೆಡ್ –ಕೆ, ಜೆಇಇ ಅಂಕಗಳನ್ನು ಆಧರಿಸಿ ಭರ್ತಿ ಮಾಡಲಾಗುವುದು. ರಾಜ್ಯದಲ್ಲಿ 20 ಖಾಸಗಿ ವಿವಿಗಳಿದ್ದು, ಈ ವರ್ಷದಿಂದ ಪ್ರತ್ಯೇಕ ಸಿಇಟಿ ಇಲ್ಲದಿರುವುದರಿಂದ ಶೇಕಡ 55 ರಷ್ಟು ಸೀಟುಗಳ ಭರ್ತಿಗೆ ಜೆಇಇ ಅಂಕಗಳನ್ನು ಪ್ರಮುಖವಾಗಿ ಪರಿಗಣಿಸಲು ತೀರ್ಮಾನಿಸಿವೆ.

ಖಾಸಗಿ ವಿವಿಗಳ ಪ್ರತ್ಯೇಕ ಸಿಇಟಿಯಿಂದಾಗಿ ಸಿಇಟಿ, ಜಿಇಇ, ಕಾಮೆಡ್ -ಕೆ ಅಲ್ಲದೆ ಪ್ರತಿ ಖಾಸಗಿ ವಿವಿಗಳ ಪ್ರವೇಶ ಪರೀಕ್ಷೆಗೆ ಪ್ರತ್ಯೇಕ ಶುಲ್ಕ ಪಾವತಿಸಿ ದೂರದ ಊರುಗಳಿಂದ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆಗೆ ಬರೆಯಬೇಕಿತ್ತು. ಕೌನ್ಸೆಲಿಂಗ್ ನಲ್ಲಿ ಭಾಗವಹಿಸಬೇಕಿತ್ತು. ಇದರಿಂದ ವಿದ್ಯಾರ್ಥಿಗಳು, ಪೋಷಕರಿಗೆ ತೊಂದರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರದ ಮನವಿ ಮೇರೆಗೆ ಖಾಸಗಿ ವಿವಿಗಳು ಪ್ರತ್ಯೇಕ ಸಿಇಟಿ ನಡೆಸದಿರಲು ನಿರ್ಧರಿಸಿವೆ ಎನ್ನಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read