SHOCKING: ಪತಿಯಿಂದ ಪದೇ ಪದೇ ಅತ್ಯಾಚಾರಕ್ಕೊಳಗಾದ ಯುವತಿಗೆ ಗರ್ಭಪಾತದ ಮಾತ್ರೆ ಕೊಟ್ಟ ಪತ್ನಿ

ನವದೆಹಲಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ದೆಹಲಿಯ ಹಿರಿಯ ಅಧಿಕಾರಿಯ ಮೇಲೆ ಪ್ರಕರಣ ದಾಖಲಾಗಿದೆ.

ಉತ್ತರ ದಿಲ್ಲಿಯ ಬುರಾರಿಯಲ್ಲಿ 12ನೇ ತರಗತಿ ವಿದ್ಯಾರ್ಥಿನಿ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಆರೋಪದ ಮೇಲೆ ದಿಲ್ಲಿ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರೊಬ್ಬರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಆರೋಪಿಯು 2020 ರಿಂದ 2021 ರ ನಡುವೆ ತನ್ನ ಸ್ನೇಹಿತನ ಅಪ್ರಾಪ್ತ ಮಗಳ ಮೇಲೆ ತನ್ನ ಹೆಂಡತಿಯ ಸಹಾಯದಿಂದ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅವರ ಪತ್ನಿ ಕೂಡ ಕೃತ್ಯದಲ್ಲಿ ಅವರಿಗೆ ಸಹಾಯ ಮಾಡಿದ್ದರಿಂದ ಮತ್ತು ಪೊಲೀಸರಿಗೆ ವಿಷಯವನ್ನು ವರದಿ ಮಾಡದ ಕಾರಣ, ನಾವು ಅವರ ಪತ್ನಿ ವಿರುದ್ಧ ಎಫ್‌ಐಆರ್‌ನಲ್ಲಿ ಸೆಕ್ಷನ್ 120-ಬಿ(ಅಪರಾಧ ಪಿತೂರಿ) ಅನ್ನು ಸೇರಿಸಲಾಗಿದೆ.

ಸಂತ್ರಸ್ತೆ 12ನೇ ತರಗತಿ ವಿದ್ಯಾರ್ಥಿನಿ. ಆಕೆ ಆರೋಪಿಯನ್ನು ಚರ್ಚ್‌ನಲ್ಲಿ ಭೇಟಿಯಾಗಿದ್ದಳು. 2020 ರಲ್ಲಿ ವಿದ್ಯಾರ್ಥಿನಿ ತಂದೆ ನಿಧನರಾದ ನಂತರ ಅವಳು ಖಿನ್ನತೆಗೆ ಒಳಗಾಗಿದ್ದಳು.

ಆರೋಪಿ ಆಕೆಯೊಂದಿಗೆ ಸ್ನೇಹ ಬೆಳೆಸಿದ್ದರಿಂದ ಸಹಾಯ ಮಾಡುವ ನೆಪದಲ್ಲಿ ಆಕೆಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಹುಡುಗಿ ಗರ್ಭಿಣಿಯಾದಾಗ, ಘೋರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದ. ಸಂತ್ರಸ್ತೆ ಆರೋಪಿಯ ಹೆಂಡತಿಗೆ ನಡೆದ ಘಟನೆ ಬಗ್ಗೆ ಹೇಳಿದಾಗ, ಆಕೆಗೆ ಸಹಾಯ ಮಾಡುವ ಬದಲು ಆಕೆಯ ಭ್ರೂಣವನ್ನು ಗರ್ಭಪಾತ ಮಾಡಿಸಿದ್ದಾಳೆ. ಗರ್ಭಪಾತದ ಮಾತ್ರೆಗಳ ಕೊಟ್ಟಿದ್ದಾಳೆ.

ಸದ್ಯ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಪೊಲೀಸರು ಆಕೆಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಸ್ಥಳೀಯ ಮ್ಯಾಜಿಸ್ಟ್ರೇಟ್ ಬಳಿಗೆ ಕರೆದೊಯ್ದು ಹೇಳಿಕೆ ದಾಖಲಿಸಲಾಗುವುದು.

ಆರೋಪಿ ಮತ್ತು ಆತನ ಪತ್ನಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read