BREAKING : ಹಿರಿಯ ದಲಿತ ಹೋರಾಟಗಾರ ‘ಜಿಗಣಿ ಶಂಕರ್’ ಹೃದಯಾಘಾತದಿಂದ ನಿಧನ

ಬೆಂಗಳೂರು : ಹಿರಿಯ ದಲಿತ ಹೋರಾಟಗಾರ ಜಿಗಣಿ ಶಂಕರ್ ( jigani Shankar ) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅನೇಕಲ್ ತಾಲೂಕಿನ ಜಿಗಣಿಯವರಾದ ಶಂಕರ್ ಹಲವು ಹೋರಾಟಗಳಿಂದ ಬಹಳ ಜನಪ್ರಿಯರಾಗಿದ್ದರು. ಆದರೆ ವಿಧಿ ಅಟ್ಟಹಾಸಕ್ಕೆ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ.

ಜಿಗಣಿ ಶಂಕರ್ ದಲಿತ ಸಂಘಟನೆ ಹಾಗೂ ದಲಿತ ಪಕ್ಷಕಟ್ಟಿ ಸಾಕಷ್ಟು ಹೋರಾಟ ಮಾಡಿದ್ದರು. ಅವರು ಖಾಸಗಿ ಕಾರ್ಯಕ್ರಮಕ್ಕೆ ಕೋಲಾರಕ್ಕೆ ಹೋಗಿದ್ದಾಗ ಹೃದಯಾಘಾತ ಸಂಭವಿಸಿದೆ. ಇಂದು ಸಂಜೆ 4 ಗಂಟೆಗೆ ಬಂಡೇನಲ್ಲಸಂದ್ರ ಗ್ರಾಮದ ಜಮೀನಿನಲ್ಲಿ ಅವರ ಅಂತ್ಯಕ್ರಿಯೆ ನಡೆಸುವುದಾಗಿ ಕುಟುಂಬದ ಮೂಲಗಳು ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read