‘ಕಾಸ್ಟಿಂಗ್ ಕೌಚ್’ ಕುರಿತು ಶಾಕಿಂಗ್ ಸಂಗತಿ ಬಿಚ್ಚಿಟ್ಟ ಸ್ಯಾಂಡಲ್ ವುಡ್ ನಟಿ

ಸ್ಯಾಂಡಲ್ ವುಡ್ ಸೇರಿದಂತೆ ವಿವಿಧ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಆಮನಿ ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ಅಲ್ಲದೆ ಈ ಕಾರಣಕ್ಕಾಗಿಯೇ ತಾವು ಚಿತ್ರರಂಗ ಪ್ರವೇಶಿಸಲು ವಿಳಂಬವಾಯಿತು ಎಂದು ಹೇಳಿಕೊಂಡಿದ್ದಾರೆ.

ಆರಂಭದ ದಿನಗಳಲ್ಲಿ ಅವಕಾಶ ಕೇಳಿಕೊಂಡು ಆಮನಿ ಹೋದ ವೇಳೆ ಕೆಲವರು ಆಡಿಶನ್ ತೆಗೆದುಕೊಂಡ ಬಳಿಕ ಸೆಲೆಕ್ಟ್ ಮಾಡಿದರೂ ಸಹ ನಂತರ ರಿಜೆಕ್ಟ್ ಮಾಡುತ್ತಿದ್ದರಂತೆ. ಮತ್ತಷ್ಟು ಮಂದಿ ನಾವು ಫೋನ್ ಮಾಡಿ ತಿಳಿಸುತ್ತೇವೆ ಎಂದು ಹೇಳುತ್ತಿದ್ದರಂತೆ.

ಓರ್ವ ನಿರ್ದೇಶಕನ ಸಹಾಯಕನಂತೂ ಆಮನಿಗೆ ಕರೆ ಮಾಡಿ ನಿಮ್ಮನ್ನು ಬೀಚ್ ರೆಸಾರ್ಟ್ ಗೆ ಬರಲು ನಿರ್ದೇಶಕರು ಹೇಳಿದ್ದಾರೆ. ಒಬ್ಬಂಟಿಯಾಗಿ ಅಲ್ಲಿಗೆ ಹೋಗಿ, ನಿಮ್ಮ ತಾಯಿಯನ್ನು ಕರೆದುಕೊಂಡು ಬರಬೇಡಿ ಎಂದಿದ್ದನಂತೆ. ಅರ್ಥಾತ್ ಲೈಂಗಿಕವಾಗಿ ಸಹಕರಿಸಲು ಆತ ಪರೋಕ್ಷವಾಗಿ ಬೇಡಿಕೆ ಇಟ್ಟಿದ್ದನಂತೆ.

ಆದರೆ ವಾಮಮಾರ್ಗದಲ್ಲಿ ಚಿತ್ರರಂಗಕ್ಕೆ ಕಾಲಿಡುವುದು ನನಗೆ ಇಷ್ಟ ಇರಲಿಲ್ಲ. ಹೀಗಾಗಿ ನಾನು ಈ ವೃತ್ತಿ ಬದುಕಿಗೆ ಬರುವುದು ತಡವಾಯಿತು. ಆ ಬಳಿಕವೂ ನಾನು ಎಲ್ಲೇ ಹೋದರೂ ತಾಯಿಯನ್ನು ಕರೆದುಕೊಂಡು ಹೋಗುತ್ತಿದ್ದೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read