ನಕಲಿ ಸ್ಟಿಕ್ಕರ್ ಅಂಟಿಸಿ ವಿದೇಶಿ ಚಾಕೊಲೇಟ್ ಮಾರಾಟ; ಆರೋಪಿ ಅರೆಸ್ಟ್

ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರದ (fssai) ನಕಲಿ ಸ್ಟಿಕ್ಕರ್ ಅಂಟಿಸಿ ವಿದೇಶಿ ಚಾಕೊಲೇಟ್, ಬಿಸ್ಕೆಟ್ ಹಾಗೂ ಪಾನೀಯಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನದ ನರೇಂದ್ರ ಸಿಂಗ್ ಬಂಧಿತ ಆರೋಪಿಯಾಗಿದ್ದು, ಹಡಗಿನ ಮೂಲಕ ವಿದೇಶಿ ಚಾಕೋಲೇಟ್, ಬಿಸ್ಕೆಟ್ ಹಾಗೂ ಪಾನೀಯವನ್ನು ಅಕ್ರಮವಾಗಿ ಅಮದು ಮಾಡಿಕೊಳ್ಳುತ್ತಿದ್ದ ಈತ ಬೆಂಗಳೂರಿನ ಸುಧಾಮ ನಗರದಲ್ಲಿರುವ ತನ್ನ ಗೋದಾಮಿನಲ್ಲಿ ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರದ ನಕಲಿ ಸ್ಟಿಕ್ಕರ್ ಅಂಟಿಸಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ.

ಇದರ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಬುಧವಾರದಂದು ಗೋದಾಮಿನ ಮೇಲೆ ದಾಳಿ ನಡೆಸಿ ಒಂದು ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ಚಾಕೊಲೇಟ್, ಬಿಸ್ಕೆಟ್ ಹಾಗೂ ಪಾನೀಯಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಈತ ಹಡಗಿನ ಮೂಲಕ ತಾನು ವಿದೇಶದಿಂದ ತರಿಸಿಕೊಂಡಿದ್ದ ಈ ಪದಾರ್ಥಗಳಿಗೆ ಯಾವುದೇ ಬಿಲ್ ಹೊಂದಿರಲಿಲ್ಲ ಎಂದು ಹೇಳಲಾಗಿದೆ. ಅಲ್ಲದೆ ಸುಂಕ ಕಟ್ಟಿದ್ದಕ್ಕೆ ರಶೀದಿ ಕೂಡ ಇರಲಿಲ್ಲ ಎಂದು ತಿಳಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read